×
Ad

ಹುಕ್ಕಾ ಬಾರ್ ಮೇಲೆ ದಾಳಿ: ಬಿಗ್ ಬಾಸ್ ವಿಜೇತ ಮುನವ್ವರ್ ಫಾರೂಕಿ ಸಹಿತ 14 ಮಂದಿ ಪೊಲೀಸ್ ವಶಕ್ಕೆ

Update: 2024-03-27 11:33 IST

ಮುನವ್ವರ್ ಫಾರೂಕಿ | Photo: X  \ @munawar0018

ಮುಂಬೈ: ದಕ್ಷಿಣ ಮುಂಬೈನಲ್ಲಿ ಹುಕ್ಕಾ ಬಾರ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭ ಸ್ಟ್ಯಾಂಡಪ್ ಕಾಮಿಡಿಯನ್ ಹಾಗೂ ಬಿಗ್ ಬಾಸ್ 17ನೇ ಆವೃತ್ತಿಯ ವಿಜೇತ ಮುನವ್ವರ್ ಫಾರೂಕಿ ಸೇರಿದಂತೆ 14 ಮಂದಿಯನ್ನು ಮುಂಬೈ ಪೊಲೀಸರು ವಶಕ್ಕೆಪಡೆದಿದ್ದಾರೆ.

ಮಂಗಳವಾರ ರಾತ್ರಿ ಸುಮಾರು 10.30ರ ವೇಳೆಗೆ ಕೋಟೆಯ ಬೋರಾ ಬಝಾರ್ ಪ್ರದೇಶದಲ್ಲಿರುವ ಹುಕ್ಕಾ ಬಾರ್ ಒಂದರ ಮೇಲೆ ಮುಂಬೈ ಪೊಲೀಸ್ ಇಲಾಖೆಯ ಸಾಮಾಜಿಕ ಸೇವೆ ವಿಭಾಗದ ನಗರ ಪೊಲೀಸರು ದಾಳಿ ನಡೆಸಿದ್ದು, ಈ ದಾಳಿ ಬುಧವಾರ ಮುಂಜಾನೆ 5 ಗಂಟೆಯವರೆಗೂ ಮುಂದುವರಿದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ದಾಳಿಯ ಸಂದರ್ಭದಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಮುನವ್ವರ್ ಫಾರೂಕಿ ಹಾಗೂ ಇನ್ನಿತರರು ಒಟ್ಟಾಗಿ ಹುಕ್ಕಾ ಸೇವಿಸುತ್ತಿರುವುದನ್ನು ಪೊಲೀಸರು ಕಂಡರು. ನಮ್ಮ ಬಳಿ ವಿಡಿಯೊ ಕೂಡಾ ಇದೆ. ನಾವು ಮುನವ್ವರ್ ಹಾಗೂ ಇನ್ನಿತರರನ್ನು ವಶಕ್ಕೆ ಪಡೆದೆವಾದರೂ, ಅವರ ವಿರುದ್ಧ ಹೇರಲಾಗಿರುವ ಸೆಕ್ಷನ್ ಗಳು ಜಾಮೀನುಸಹಿತವಾಗಿರುವುದರಿಂದ ನಂತರ ಅವರನ್ನೆಲ್ಲ ಬಿಡುಗಡೆ ಮಾಡಲಾಯಿತು” ಎಂದು ಅವರು ಹೇಳಿದ್ದಾರೆ.

ದಾಳಿಗೂ ಮುನ್ನ ಗಿಡಮೂಲಿಕೆ ಹುಕ್ಕಾಗಳನ್ನು ಸೇವಿಸುವ ಸೋಗಿನಲ್ಲಿ ಕೆಲವು ಗ್ರಾಹಕರು ತಂಬಾಕು ಆಧಾರಿತ ಹುಕ್ಕಾವನ್ನು ಸೇವಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಸ್ವೀಕರಿಸಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಮುನವ್ವರ್ ಹಾಗೂ ಇನ್ನಿತರರಿಗೆ ಮಾತಾ ರಮಾಬಾಯಿ ಅಂಬೇಡ್ಕರ್ ಮಾರ್ಗ್ ಪೊಲೀಸರು ನೋಟಿಸ್ ನೀಡಲಾಗಿದ್ದು, ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News