×
Ad

ಪಶ್ಚಿಮ ಬಂಗಾಳ| ವಲಸೆ ಕಾರ್ಮಿಕರ ಮೇಲೆ ದಾಳಿ: ಮುರ್ಷಿದಾಬಾದ್‌ನಲ್ಲಿ ಸ್ಥಳೀಯರಿಂದ ಪ್ರತಿಭಟನೆ

Update: 2026-01-16 22:20 IST

ಸಾಂದರ್ಭಿಕ ಚಿತ್ರ | Photo Credit ; PTI


ಕೋಲ್ಕತಾ, ಜ. 16: ಇತರ ರಾಜ್ಯಗಳಲ್ಲಿ ಮುರ್ಷಿದಾಬಾದ್ ಜಿಲ್ಲೆಯ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ಪಶ್ಚಿಮಬಂಗಾಳದ ಮುರ್ಶಿದಾಬಾದ್‌ನಲ್ಲಿ ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬೆಲಡಾಂಗಾ 1 ಪ್ರದೇಶದ ಮಹೇಶಪುರದಲ್ಲಿ ಬೆಳಗ್ಗೆ 9 ಗಂಟೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಕಾರರು ವಾಹನ ಸಂಚಾರಕ್ಕೆ ತಡೆ ಒಡ್ಡಿದರು. ಇದರಿಂದ ಉತ್ತರ ಪಶ್ಚಿಮಬಂಗಾಳವನ್ನು ದಕ್ಷಿಣದ ನಗರಗಳೊಂದಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಇದಲ್ಲದೆ ಪ್ರತಿಭಟನಕಾರರು ಟಯರ್‌ಗಳಿಗೆ ಬೆಂಕಿ ಹಚ್ಚಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಿಂದ ಕೆಲಸಕ್ಕಾಗಿ ವಲಸೆ ಹೋದ ಕಾರ್ಮಿಕರು ಇತರ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವುದಕ್ಕೆ ಮತ್ತೆ ಮತ್ತೆ ದಾಳಿ ಹಾಗೂ ಅಸುರಕ್ಷಿತ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

‘‘ಮುರ್ಶಿದಾಬಾದ್‌ನ ವಲಸಿಗರನ್ನು ಪಶ್ಚಿಮಬಂಗಾಳದ ಹೊರಗೆ ಬಾಂಗ್ಲಾದೇಶಿಗಳು ಎಂದು ಹಣೆ ಪಟ್ಟಿ ಹಚ್ಚಲಾಗುತ್ತಿದೆ. ಬಂಗಾಳಿ ಮಾತನಾಡುತ್ತಿರುವುದಕ್ಕೆ ಅವರು ದೌರ್ಜನ್ಯ ಎದುರಿಸುತ್ತಿದ್ದಾರೆ. ಇಂತಹ ದಾಳಿಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡುವಂತೆ ನಾವು ಆಗ್ರಹಿಸುತ್ತೇವೆ’’ ಎಂದು ಪ್ರತಿಭಟನಕಾರರು ಹೇಳಿದ್ದಾರೆ.

ಕೆಲಸಕ್ಕಾಗಿ ಜಾರ್ಖಂಡ್‌ಗೆ ವಲಸೆ ಹೋದ ಮುರ್ಶಿದಾಬಾದ್ ನಿವಾಸಿ ಹತ್ಯೆ ಕುರಿತು ಸುದ್ದಿ ಹರಡಿದ ಬಳಿಕ ಈ ಪ್ರತಿಭಟನೆ ಭುಗಿಲೆದ್ದಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News