×
Ad

ಹತ್ಯೆ ಯತ್ನ ಪ್ರಕರಣ | ಎಸ್‌ ಪಿ ಶಾಸಕ ಮನೋಜ್ ಪಾರಸ್‌ ಗೆ ಜೈಲು

Update: 2025-09-10 21:49 IST

ಮನೋಜ್ ಪಾರಸ್‌ | Credit: Facebook/Manoj Paras

ಬಿಜ್ನೂರ್, ಸೆ. 10: 2020ರ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ನಗೀನಾ ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕ ಮನೋಜ್ ಪಾರಸ್ ಅವರ ಜಾಮೀನು ಅರ್ಜಿಯನ್ನು ವಿಶೇಷ ಎಂಪಿ-ಎಂಎಲ್‌ಎ ನ್ಯಾಯಾಲಯ ತಿರಸ್ಕರಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

2020 ಸೆಪ್ಟಂಬರ್ 29ರಂದು ಝುಲು ರಸ್ತೆಯಲ್ಲಿ ಮನೋಜ್ ಪಾರಸ್ ಅವರು ತನ್ನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ರಶೀದ್‌ಪುರಗಡಿಯ ಗ್ರಾಮಸ್ಥ ಛಾತರ್ ಸಿಂಗ್ ಅವರು ದೂರು ದಾಖಲಿಸಿದ್ದರು ಎಂದು ಹೆಚ್ಚುವರಿ ಜಿಲ್ಲಾ ಸರಕಾರಿ ವಕೀಲ ಜಿತೇಂದ್ರ ಚೌಹಾಣ್ ತಿಳಿಸಿದ್ದಾರೆ.

ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಇತರ ಕೆಲವು ನಾಯಕರೊಂದಿಗೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪಾರಸ್ ಅವರ ಹೆಸರು ಕೂಡ ಇದೆ.

ಅನಂತರ ಅವರ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧಾನದೇಶ ಹೊರಡಿಸಿದೆ.

ಪಾರಸ್ ಅವರು ಮಂಗಳವಾರ ನ್ಯಾಯಮೂರ್ತಿ ಶಂತನು ತ್ಯಾಗಿ ಅವರ ಮುಂದೆ ಹಾಜರಾಗಿದ್ದಾರೆ. ತ್ಯಾಗಿ ಅವರು ಪರಾಸ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ ಹಾಗೂ ಅವರನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಚೌಹಾಣ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News