×
Ad

ಬಲವಂತದಿಂದ ತೆರವು ಪ್ರಕರಣ | ಎಸ್‌ಪಿ ನಾಯಕ ಅಝಂ ಖಾನ್‌ ಗೆ ಜಾಮೀನು ಮಂಜೂರು

Update: 2025-09-10 20:32 IST

ಅಝಂ ಖಾನ್‌ | PC : PTI

ಪ್ರಯಾಗರಾಜ್(ಉ.ಪ್ರ).ಸೆ.10: ಅಲಹಾಬಾದ್ ಉಚ್ಚ ನ್ಯಾಯಾಲಯವು ರಾಮಪುರದ ಡುಂಗರಪುರ ಕಾಲನಿಯ ನಿವಾಸಿಗಳನ್ನು ಬಲವಂತದಿಂದ ತೆರವುಗೊಳಿಸಿದ್ದ ಪ್ರಕರಣದಲ್ಲಿ ಸಮಾಜವಾದಿ ಪಾರ್ಟಿಯ(ಎಸ್‌ಪಿ) ನಾಯಕ ಅಝಂ ಖಾನ್ ಅವರಿಗೆ ಬುಧವಾರ ಜಾಮೀನು ಮಂಜೂರು ಮಾಡಿದೆ.

ರಾಮಪುರದ ಜನ ಪ್ರತಿನಿಧಿಗಳ ನ್ಯಾಯಾಲಯದಿಂದ ತನ್ನ ದೋಷನಿರ್ಣಯ ಮತ್ತು 10 ವರ್ಷಗಳ ಶಿಕ್ಷೆಯ ವಿರುದ್ಧ ಖಾನ್ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾ.ಸಮೀರ್ ಜೈನ್ ಅವರು ಜಾಮೀನು ಮಂಜೂರು ಮಾಡಿದರು.

ಖಾನ್ ಮತ್ತು ಗುತ್ತಿಗೆದಾರ ಬರ್ಕತ್ ಅಲಿ ಎನ್ನುವವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಉಚ್ಚ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದರಿಸಿತ್ತು. ಅಲಿ ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಬಳಿಕ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಕಳೆದ ವರ್ಷದ ಮೇ 30ರಂದು ಜನ ಪ್ರತಿನಿಧಿಗಳ ನ್ಯಾಯಾಲಯವು ಖಾನ್‌ಗೆ 10 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News