×
Ad

ರಾಮದೇವ್‌ ಗೆ ಮತ್ತೆ ಹಿನ್ನಡೆ: 3 ದಿನಗಳಲ್ಲಿ ಕೊರೋನಾಗೆ ʼಕೊರೊನಿಲ್ʼ ಔಷಧಿ ಹೇಳಿಕೆ ಹಿಂಪಡೆಯುವಂತೆ ನ್ಯಾಯಾಲಯ ಆದೇಶ

Update: 2024-07-29 18:00 IST

ಯೋಗ ಗುರು ರಾಮದೇವ್ | PC : PTI

ಹೊಸದಿಲ್ಲಿ: ಕೊರೋನ ಸಾಂಕ್ರಾಮಿಕ ಸಮಯದಲ್ಲಿ ಸಾವಿರಾರು ಜನರ ಸಾವಿಗೆ ಅಲೋಪತಿ ವೈದ್ಯರೇ ಕಾರಣ ಎಂದು ದೂಷಿಸಿರುವ ಮತ್ತು ಪತಂಜಲಿಯ ಕೊರೊನಿಲ್ ಔಷಧವನ್ನು ಚಿಕಿತ್ಸೆಯಾಗಿ ಪ್ರಚಾರ ಮಾಡುವ ಎಲ್ಲಾ ಹೇಳಿಕೆಗಳನ್ನು ಮೂರು ದಿನಗಳಲ್ಲಿ ಹಿಂಪಡೆಯುವಂತೆ ಬಾಬಾ ರಾಮ್‌ದೇವ್ ಅವರಿಗೆ ನ್ಯಾಯಾಲಯ ಸೂಚಿಸಿದೆ.

ಯೋಗ ಗುರು ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರಿಗೆ ಕೊರೊನಿಲ್ ಕೋವಿಡ್ -19 ಅನ್ನು ಗುಣಪಡಿಸುತ್ತದೆ ಎಂಬ ಹೇಳಿಕೆಗಳನ್ನು ಮೂರು ದಿನಗಳಲ್ಲಿ ಹಿಂಪಡೆಯುವಂತೆ ದಿಲ್ಲಿ ಹೈಕೋರ್ಟ್ ಆದೇಶಿಸಿದೆ.

‘ಕೊರೊನಿಲ್’ ಅನ್ನು ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ಎನ್ನುವ ಬದಲು ಅದನ್ನು ಚಿಕಿತ್ಸೆ ಎಂದು ರಾಮ್‌ದೇವ್ ತಪ್ಪಾಗಿ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ದಿಲ್ಲಿ ವೈದ್ಯಕೀಯ ಸಂಘ ದೂರು ದಾಖಲಿಸಿತ್ತು.

ಇನ್ನು ಮುಂದೆ ಇಂತಹ ಹೇಳಿಕೆಗಳನ್ನು ನೀಡದಂತೆ ರಾಮ್‌ದೇವ್ ಅವರಿಗೆ ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರ ಪೀಠ ಸೂಚಿಸಿದೆ. ಅಲ್ಲದೇ ಈ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಿಂದ ಮೂರು ದಿನಗಳಲ್ಲಿ ತೆಗೆದುಹಾಕುವಂತೆ ಸೂಚಿಸಿದೆ.

ಒಂದು ವೇಳೆ ಮೂರು ದಿನಗಳಲ್ಲಿ ಬಾಬಾ ರಾಮ್‌ದೇವ್ ತಮ್ಮ ಹೇಳಿಕೆಗಳನ್ನು ಹಿಂಪಡೆಯದಿದ್ದರೆ, ಸಾಮಾಜಿಕ ಮಾಧ್ಯಮಗಳೇ ಆ ಹೇಳಿಕೆಗಳನ್ನು ತೆಗೆದುಹಾಕಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News