×
Ad

ಬಾಹುಬಲಿ ರಾಕೆಟ್ ಮೂಲಕ ನೌಕಾಪಡೆಯ ಅತಿ ಭಾರದ ಸಂವಹನ ಉಪಗ್ರಹ ನಾಳೆ(ನ.2) ಉಡಾವಣೆ

Update: 2025-11-01 21:19 IST

Photo Credit : @ISRO

ಹೊಸದಿಲ್ಲಿ, ನ.1: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ರವಿವಾರ ತನ್ನ ಬಾಹುಬಲಿ ರಾಕೆಟ್ ಅನ್ನು ಉಡಾವಣೆಗೊಳಿಸಲಿದೆ. ನೌಕಾಪಡೆಯ ಸಂವಹನಕ್ಕೆ ಹಾಗೂ ದೇಶರಕ್ಷಣೆಗೆ ನೆರವಾಗುವ ಉದ್ದೇಶ ಹೊಂದಿರುವ ಅತಿ ಭಾರದ ಉಪಗ್ರಹವನ್ನು ಅದು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ರವಿವಾರ ಸಂಜೆ 5.26ರ ವೇಳೆಗೆ ಬಾಹುಬಲಿ ರಾಕೆಟ್ (ಎಲ್‌ವಿಎಂ-3) ಉಡಾವಣೆಗೊಳ್ಳಲಿದೆ. ಶ್ರೀಹರಿಯ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಿದಂದ ಈ ಮಾದರಿಯ ರಾಕೆಟ್ ಉಡಾವಣೆಗೊಳ್ಳಲಿರುವುದು ಇದು ಎಂಟನೇ ಸಲವಾಗಿದೆ.

ಬಾಹುಬಲಿ ರಾಕೆಟ್ ಸಮುದ್ರಯಾನ ರಕ್ಷಣಾ ಸಂಹವನಗಳಿಗೆ ಬಳಕೆಯಾಗುವ ‘ಸಿಎಂಎಸ್-03’ ಉಪಗ್ರಹವನ್ನು ಹೊತ್ತೊಯ್ಯಲಿದೆ.

4,400 ಕೆ.ಜಿ. ತೂಕದ ಈ ಉಪಗ್ರಹವು ಭೂಸ್ಥಿರ ವರ್ಗಾವಣೆ ಕಕ್ಷೆ (ಜಿಯೋ ಸಿಂಕ್ರೋನಸ್ ಟ್ರಾನ್ಸಫರ್ ಆರ್ಬಿಟ್)ಗೆ ಉಡಾವಣೆಗೊಳ್ಳಲಿರುವ ಭಾರತದ ಅತಿ ಭಾರದ ಸಂವಹನ ಉಪಗ್ರಹವಾಗಿದೆ.

ಸಿಎಂಎಸ್-3 ಉಪಗ್ರಹವು, ಜಿಎಸ್‌ಎಟಿ-7 ಅಥವಾ ರುಕ್ಮಿಣಿ ಉಪಗ್ರಹವನ್ನು ತೆರವುಗೊಳಿಸಲಿದೆ. ರುಕ್ಮಿಣಿ ಉಪಗ್ರಹವು 2013ರಿಂದ ಭಾರತೀಯ ನೌಕಾಪಡೆಗೆ ಸೇವೆ ಸಲ್ಲಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News