ಬಲೂಚ್ ಪತ್ರಕರ್ತನ ಗುಂಡಿಕ್ಕಿ ಹತ್ಯೆ
Update: 2025-05-24 21:24 IST
ಅಬ್ದುಲ್ ಲತೀಫ್ | PC : Baloch Yakjehti Committee
ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತದ ಸಂಘರ್ಷ ಪೀಡಿತ ಅವಾರಾನ್ ಜಿಲ್ಲೆಯಲ್ಲಿ ಬಲೂಚ್ ಸಮುದಾಯಕ್ಕೆ ಸೇರಿದ ಪತ್ರಕರ್ತ ಅಬ್ದುಲ್ ಲತೀಫ್ ರನ್ನು ಅವರ ಮನೆಯೆದುರೇ ಶನಿವಾರ ಬೆಳಿಗ್ಗೆ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
`ಡೈಲಿ ಇಂತಿಖಾಬ್' ಮತ್ತು ಆಜ್ ನ್ಯೂಸ್ ಜೊತೆ ಕೆಲಸ ಮಾಡುತ್ತಿದ್ದ ಲತೀಫ್ ರನ್ನು ಅವರ ಪತ್ನಿ, ಮಕ್ಕಳ ಎದುರೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಲೂಚಿಸ್ತಾನ್ ಪ್ರದೇಶದಲ್ಲಿ ಪಾಕಿಸ್ತಾನದ ಸೇನೆಯೊಂದಿಗೆ ಗುರುತಿಸಿಕೊಂಡಿರುವ ಸಶಸ್ತ್ರ ಹೋರಾಟಗಾರರ ಗುಂಪು ಹತ್ಯೆ ನಡೆಸಿದೆ ಎಂದು ಬಲೂಚ್ ಹಕ್ಕುಗಳ ಗುಂಪು ಮತ್ತು ಸ್ಥಳೀಯ ಮಾಧ್ಯಮಗಳು ಹೇಳಿವೆ.