×
Ad

ಬ್ಯಾಂಕ್ ಸಾಲ ವಂಚನೆ ಹಗರಣ: ‘ಆರ್‌ಕಾಂ’ ಮಾಜಿ ಅಧ್ಯಕ್ಷ ಪುನೀತ್ ಗಾರ್ಗ್ ಬಂಧನ

Update: 2026-01-31 21:30 IST

ಪುನೀತ್ ಗಾರ್ಗ್ | Photo Credit : indiatoday.in

ಹೊಸದಿಲ್ಲಿ: ಅನಿಲ್ ಅಂಬಾನಿ ನೇತೃತ್ವದ ಉದ್ಯಮ ಸಮೂಹ ಶಾಮೀಲಾಗಿದೆಯೆನ್ನಲಾದ 40 ಸಾವಿರ ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣದ ಆರೋಪಗಳಿಗೆ ಸಂಬಂಧಿಸಿ ರಿಲಾಯನ್ಸ್ ಕಮ್ಯುನಿಕೇಶನ್ಸ್ (ಆರ್‌ಕಾಂ )ನ ಮಾಜಿ ಅಧ್ಯಕ್ಷ ಪುನೀತ್ ಗಾರ್ಗ್ ಅವರನ್ನು ಜಾರಿ ನಿರ್ದೇಶನಾಲಯವು ಶನಿವಾರ ಬಂಧಿಸಿದೆ.

ಗಾರ್ಗ್ ಅವರನ್ನು ಗುರುವಾರ ಬಂಧಿಸಲಾಗಿದ್ದು, ದಿಲ್ಲಿಯ ನ್ಯಾಯಾಲಯವು ಅವರನ್ನು 9 ದಿನಗಳ ಕಾಲ ಜಾರಿ ನಿರ್ದೇಶನಾಲಯ (ಈ.ಡಿ.) ಕಸ್ಟಡಿಗೆ ಒಪ್ಪಿಸಿದೆ ಎಂದು ಏಜೆನ್ಸಿಯ ಹೇಳಿಕೆ ತಿಳಿಸಿದೆ.

ರಿಲಾಯನ್ಸ್ ಅನಿಲ್ ಅಂಬಾನಿ ಸಮೂಹಕ್ಕೆ ಸೇರಿದ 1885 ಕೋಟಿ ರೂ. ಮೌಲ್ಯದ ಹೊಸ ಆಸ್ತಿಗಳನ್ನು ಏಜೆನ್ಸಿಯು ಮುಟ್ಟುಗೋಲು ಹಾಕಿತ್ತು. ಇದರೊಂದಿಗೆ ಪ್ರಕರಣದ ತನಿಖೆಗೆ ಸಂಬಂಧಿಸಿ ಅನಿಲ್ ಅಂಬಾನಿ ಅವರಿಗೆ ಸೇರಿದ 12 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿದಂತಾಗಿದೆ.

ಗಾರ್ಗ್ ಅವರು 2006ರಿಂದ 2013ರವರೆಗೆ ಆರ್‌ಕಾಂ ಅಧ್ಯಕ್ಷರಾಗಿ (ಜಾಗತಿಕ ಉದ್ಯಮ ವ್ಯವಹಾರ), 2014ರಿಂದ 2017ರವರೆಗೆ ಸಂಸ್ಥೆಯ ಅಧ್ಯಕ್ಷ (ನಿಯಮಿತ ವ್ಯವಹಾರಗಳ)ರಾಗಿ ಸೇವೆ ಸಲ್ಲಿಸಿದ್ದರು. 2017ರ ಆಕ್ಟೋಬರ್‌ನಲ್ಲಿ ಅವರು ಆರ್‌ಕಾಂನ ಕಾರ್ಯಕಾರಿ ನಿರ್ದೇಶಕರಾಗಿ ನೇಮಕಗೊಂಡಿದ್ದರು.ಎಪ್ರಿಲ್ 2019ರಿಂದ ಎಪ್ರಿಲ್ 2025ರವರೆಗೆ, ಕಾರ್ಯಕಾರಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಬ್ಯಾಂಕ್ ಸಾಲ ವಂಚನೆಯಿಂದ ಸೃಷ್ಟಿಯಾದ ಆದಾಯವನ್ನು ಹೊಂದಿದ ಹಾಗೂ ಬಚ್ಚಿಡುವಲ್ಲಿ ಮತು ವಿಲೇವಾರಿ ಮಾಡುವಲ್ಲಿ ಗಾರ್ಗ್ ಅವರು ಸಕ್ರಿಯವಾಗಿ ಭಾಗಿಯಾಗಿದ್ದರೆಂದು ತನಿಖೆಯು ಬಹಿರಂಗಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News