ಜಲಂಧರ್ : ಪ್ರಧಾನಿ ಮೋದಿಯವರ ಭೇಟಿಗೆ ಮುನ್ನ ಸ್ಥಳೀಯ ಶಾಲೆಗಳಿಗೆ ಬಾಂಬ್ ಬೆದರಿಕೆ
Update: 2026-01-31 20:20 IST
Photo Credit : PTI
ಜಲಂಧರ (ಪಂಜಾಬ್),ಜ.31: ರವಿದಾಸ ಪಂಥದ ಅತ್ಯಂತ ಪವಿತ್ರ ಸ್ಥಳವಾಗಿರುವ ಇಲ್ಲಿಯ ಡೇರಾ ಸಚ್‌ಖಂಡ್ ಬಲ್ಲನ್‌ಗೆ ಪ್ರಧಾನಿ ನರೇಂದ್ರ ಮೋದಿಯವರ ನಿಗದಿತ ಭೇಟಿಯ ಮುನ್ನಾದಿನವಾದ ಶನಿವಾರ ಎರಡು ಸ್ಥಳೀಯ ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದು,ಪೋಲಿಸರು ಬಾಂಬ್ ನಿಷ್ಕ್ರಿಯ ದಳಗಳೊಂದಿಗೆ ಸಮಗ್ರ ತಪಾಸಣೆ ಮತ್ತು ತನಿಖೆಯನ್ನು ಕೈಗೊಂಡಿದ್ದಾರೆ.
ಶಾಲೆಗಳಿಗೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಲಾಗಿದೆ,ಆದರೆ ಅವುಗಳಲ್ಲಿ ಡೇರಾ ಬಲ್ಲನ್‌ಗೆ ನೇರವಾಗಿ ಬೆದರಿಕೆಯೊಡ್ಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಶನಿವಾರ ರಜಾದಿನವಾಗಿದ್ದರಿಂದ ಶಾಲಾ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳಿರಲಿಲ್ಲ.
ಗುರು ರವಿದಾಸ ಜಯಂತಿ ಸಂದರ್ಭದಲ್ಲಿ ಮೋದಿ ರವಿವಾರ ದೇರಾ ಬಲ್ಲನ್‌ಗೆ ಭೇಟಿ ನೀಡಲಿದ್ದಾರೆ.
ಬುಧವಾರ ಚಂಡಿಗಡದ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದು,ತಪಾಸಣೆ ನಡೆಸಿದ ಬಳಿಕ ಅವು ಹುಸಿ ಬೆದರಿಕೆಗಳಾಗಿದ್ದವು ಎನ್ನುವುದು ದೃಢಪಟ್ಟಿತ್ತು.