×
Ad

ಉತ್ತರ ಪ್ರದೇಶ | ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರಕ್ಕೆ ವಿರೋಧಿಸಿದ ಯುವತಿಯನ್ನು ಇರಿದು ಕೊಲೆ

Update: 2025-04-20 10:50 IST

ಸಾಂದರ್ಭಿಕ ಚಿತ್ರ | PC : freepik.com

ಲಕ್ನೋ : ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ ಯತ್ನದ ವೇಳೆ ವಿರೋಧಿಸಿದ ಯುವತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಸಂತ್ರಸ್ತ ಯುವತಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಸುಧಾಂಶು ಎಂಬಾತ ಸಂತ್ರಸ್ತೆಯನ್ನು ಮದುವೆಯೊಂದರಲ್ಲಿ ಮದರಂಗಿ ಹಚ್ಚಲು ಕರೆದಿದ್ದ. ಸುಧಾಂಶು ಕಳುಹಿಸಿದ ಕೆಂಪು ಬಣ್ಣದ ಕಾರಿನಲ್ಲಿ ಅಜಯ್, ವಿಕಾಸ್ ಮತ್ತು ಆದರ್ಶ್ ಇದ್ದರು. ಬ್ಯೂಟಿಷಿಯನ್ ಮತ್ತು ಆಕೆಯ ಸಹೋದರಿ ಅದೇ ಕಾರಿನಲ್ಲಿ ಮದುವೆ ಮನೆಗೆ ಬಂದಿದ್ದರು. ಮದರಂಗಿ ಹಚ್ಚಿದ ಬಳಿಕ ಬ್ಯೂಟಿಷಿಯನ್‌ಳನ್ನು ಮತ್ತೆ ವಾಪಾಸ್ಸು ಆಕೆಯ ಮನೆಗೆ ಕರೆದುಕೊಂಡು ಹೋಗುವಾಗ ಕಾರಿನಲ್ಲಿ ಅಜಯ್, ವಿಕಾಸ್ ಮತ್ತು ಆದರ್ಶ್ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾರೆ.

ʼಚಲಿಸುತ್ತಿದ್ದ ಕಾರಿನಲ್ಲಿ ಅವರು ನನ್ನ ಮತ್ತು ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದರು. ಇದಕ್ಕೆ ನನ್ನ ಸಹೋದರಿ ವಿರೋಧಿಸಿದಾಗ, ಅಜಯ್ ಆಕೆಯ ಕುತ್ತಿಗೆಗೆ ಇರಿದಿದ್ದಾನೆ. ಇದಾದ ಬಳಿಕ ಅವರು ಕಾರನ್ನು ವಿಭಜಕಕ್ಕೆ ಢಿಕ್ಕಿ ಹೊಡೆದಿದ್ದಾರೆ. ನಾವಿಬ್ಬರು ಕಾರಿನಲ್ಲಿ ಸಿಲುಕಿಕೊಂಡೆವುʼ ಎಂದು ಸಂತ್ರಸ್ತೆಯ ಸಹೋದರಿ ಹೇಳಿದ್ದಾರೆ.


ಘಟನೆಯ ಬಗ್ಗೆ ಬ್ಯೂಟಿಷಿಯನ್ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ವಿಕಾಸ್ ಮತ್ತು ಆದರ್ಶ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಅಜಯ್ ತಲೆಮರೆಸಿಕೊಂಡಿದ್ದಾನೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸಿಪಿ ವಿಕಾಸ್ ಪಾಂಡೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News