×
Ad

ಭಗವದ್ಗೀತೆ,ಭರತ ಮುನಿಯ ನಾಟ್ಯಶಾಸ್ತ್ರಕ್ಕೆ ಯುನೆಸ್ಕೊ ಮನ್ನಣೆ

Update: 2025-04-18 20:54 IST

PC : @PiyushGoyal/X

ಹೊಸದಿಲ್ಲಿ: ಮೌಲಿಕ ಪರಂಪರೆಗಳನ್ನು ಸಂರಕ್ಷಿಸುವ ಜಾಗತಿಕ ಉಪಕ್ರಮವಾದ ಯುನೆಸ್ಕೊದ ವಿಶ್ವ ಸ್ಮರಣಿಕೆ ದಾಖಲೆಯಲ್ಲಿ ಶ್ರೀಮದ್‌ ಭಗವದ್ಗೀತಾ ಮತ್ತು ಭರತ ಮುನಿಯ ನಾಟ್ಯಶಾಸ್ತ್ರ ಪ್ರವೇಶವನ್ನು ಪಡೆದಿವೆ.

ಯುನೆಸ್ಕೊದ ಈ ಕ್ರಮವು ತಲೆಮಾರುಗಳಿಂದಲೂ ಸಮಾಜದ ಮೇಲೆ ಪ್ರಭಾವ ಬೀರಿರುವ ಮಹತ್ವದ ಐತಿಹಾಸಿಕ ಪಠ್ಯಗಳು, ಹಸ್ತಪ್ರತಿಗಳು ಮತು ದಾಖಲೆಗಳಿಗೆ ಮಾನ್ಯತೆ ನೀಡುತ್ತದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಂತಸವನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ‘ಇದು ವಿಶ್ವಾದ್ಯಂತ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣವಾಗಿದೆ. ಯುನೆಸ್ಕೊದ ಮೆಮರಿ ಆಫ್ ವರ್ಲ್ಡ್ ರಿಜಿಸ್ಟರ್‌ನಲ್ಲಿ ಗೀತಾ ಮತ್ತು ನಾಟ್ಯಶಾಸ್ತ್ರದ ಸೇರ್ಪಡೆಯು ನಮ್ಮ ಕಾಲಾತೀತ ಜ್ಞಾನ ಮತ್ತು ಶ್ರೀಮಂತ ಸಂಸ್ಕೃತಿಗೆ ದೊರಕಿರುವ ಜಾಗತಿಕ ಮನ್ನಣೆಯಾಗಿದೆ. ಗೀತಾ ಮತ್ತು ನಾಟ್ಯಶಾಸ್ತ್ರ ಶತಮಾನಗಳಿಂದಲೂ ನಾಗರಿಕತೆಯನ್ನು ಮತ್ತು ಜ್ಞಾನವನ್ನು ಪೋಷಿಸುತ್ತಲೇ ಬಂದಿವೆ. ಅವುಗಳ ಒಳನೋಟಗಳು ಜಗತ್ತಿಗೆ ಸ್ಫೂರ್ತಿಯನ್ನು ನೀಡುವುದು ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News