×
Ad

ಭಿವಂಡಿ | ಗಣಪತಿ ಮೆರವಣಿಗೆಗೆ ಕಲ್ಲುತೂರಾಟ, ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣ

Update: 2024-09-21 20:29 IST

PC : X 

ಥಾಣೆ(ಮಹಾರಾಷ್ಟ್ರ ) : ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಸೆ.18ರಂದು ಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲುತೂರಾಟಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೋಲೀಸ್ ಅಧಿಕಾರಿಯೋರ್ವರು ಶನಿವಾರ ತಿಳಿಸಿದರು.

ಸೆ.18ರಂದು ಮಧ್ಯರಾತ್ರಿಯ ಬಳಿಕ ಶ್ರೀ ಹನುಮಾನ ಸಾರ್ವಜನಿಕ ಮಿತ್ರ ಮಂಡಳದ ವಿಸರ್ಜನಾ ಮೆರವಣಿಗೆ ಮೇಲೆ ಚಿಕನ್ ಅಂಗಡಿಯೊಂದರ ದಿಕ್ಕಿನಿಂದ ಕಲ್ಲುಗಳನ್ನು ತೂರಲಾಗಿದ್ದು, ವಿಗ್ರಹಕ್ಕೆ ಹಾನಿಯುಂಟಾಗಿತ್ತು. ಇದು ವಂಜಾರಪಟ್ಟಿ ನಾಕಾ ಪ್ರದೇಶದಲ್ಲಿ ಉದ್ವಿಗ್ನತೆಗೆ ಕಾರಣವಾಗಿತ್ತು ಎಂದರು.

ವಿಹಿಂಪ ಪದಾಧಿಕಾರಿಯ ದೂರಿನ ಮೇರೆಗೆ ನಾಲ್ವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದ್ದು, ಅವರನ್ನು ಇನ್ನಷ್ಟೇ ಗುರುತಿಸಬೇಕಿದೆ ಎಂದು ಅಧಿಕಾರಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News