×
Ad

ಬಿಹಾರ: ಆಸ್ಪತ್ರೆಗೆ ನುಗ್ಗಿ ಕೊಲೆ ಆರೋಪಿಯ ಹತ್ಯೆ

Update: 2025-07-17 21:00 IST

PC : NDTV 

ಪಾಟ್ನಾ: ಬಿಹಾರ ರಾಜಧಾನಿ ಪಾಟ್ನಾದಲ್ಲಿ ಗುರುವಾರ ಐವರು ಅಜ್ಞಾತ ಬಂದೂಕುಧಾರಿಗಳು ಖಾಸಗಿ ಆಸ್ಪತ್ರೆಯೊಂದಕ್ಕೆ ನುಗ್ಗಿ ಕೊಲೆ ಪ್ರಕರಣವೊಂದರಲ್ಲಿ ದೋಷಿಯಾಗಿರುವ ವ್ಯಕ್ತಿಯೊಬ್ಬನನ್ನು ಗುಂಡು ಹಾರಿಸಿ ಕೊಂದಿದ್ದಾರೆ.

ಆ ವ್ಯಕ್ತಿಯನ್ನು ಆಸ್ಪತ್ರೆಯ ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಲಾಯಿತು. ಅಲ್ಲಿ ಆತ ಕೊನೆಯುಸಿರೆಳೆದನು ಎಂದು ಪೊಲೀಸರು ತಿಳಿಸಿದರು.

ಮೃತ ವ್ಯಕ್ತಿಯನ್ನು ರಾಜ್ಯದ ಬುಕ್ಸರ್ ಜಿಲ್ಲೆಯ ನಿವಾಸಿ ಚಂದನ್ ಎಂಬುದಾಗಿ ಗುರುತಿಸಲಾಗಿದೆ. ಅವನು ಕೊಲೆ ಪ್ರಕರಣವೊಂದರಲ್ಲಿ ದೋಷಿಯಾಗಿದ್ದನು. ಅವನು ಬೇವೂರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ವೇಳೆ, ಪರೋಲ್ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದನು ಎಂದು ಪಾಟ್ನಾ ಪೊಲೀಸ್ ಸೂಪರಿಂಟೆಂಡೆಂಟ್ ದೀಕ್ಷಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಖಾಸಗಿ ಆಸ್ಪತ್ರೆಯಲ್ಲಿ ಓರ್ವ ವ್ಯಕ್ತಿಯನ್ನು ಬಂದೂಕುಧಾರಿಗಳು ಕೊಂದಿರುವ ವಿಷಯ ಗುರುವಾರ ಬೆಳಗ್ಗೆ 7:30ಕ್ಕೆ ತಿಳಿಯಿತು ಎಂದು ಎಸ್‌ಪಿ ಹೇಳಿದರು. ಹಂತಕರ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News