×
Ad

ಬಿಹಾರ | ಪ್ರವಾಹದಲ್ಲಿ ಮೃತಪಟ್ಟಿದ್ದಾರೆಂದು ನಂಬಲಾದ ಮೂವರು ಮರಳಿ ಮನೆಗೆ

Update: 2025-08-18 22:10 IST

 ರಾಹುಲ್ ಮುಖಿಯ, ಮುನ್ನಾ ಮುಖಿಯ ಮತ್ತು ರವಿ ಕುಮಾರ್ | PC : timesofindia.indiatimes.com

ಪಾಟ್ನಾ, ಆ. 18: ಬಿಹಾರದ ಧಾರಾಳಿಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಮೃತಪಟ್ಟಿದ್ದಾರೆ ಎಂಬುದಾಗಿ ಭಾವಿಸಲಾಗಿರುವ ಮೂವರು ಪುರುಷರು ಮನೆಗೆ ಮರಳಿದ್ದಾರೆ.

ದುರ್ಗಮ ಹಳ್ಳಿಯೊಂದರ ನಿವಾಸಿಗಳಾಗಿರುವ ಈ ವ್ಯಕ್ತಿಗಳು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು ಮರಳಿದಾಗ, ಕುಟುಂಬ ಸದಸ್ಯರು ಅವರ ಅಂತ್ಯಸಂಸ್ಕಾರಕ್ಕೆ ಏರ್ಪಾಡುಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ. ಆಗ ದುಃಖದ ಸನ್ನಿವೇಶವು ಹಠಾತ್ತನೆ ಸಂತೋಷದಾಯಕ ಸನ್ನಿವೇಶವಾಗಿ ಬದಲಾಯಿತು.

ಧಾರಾಳಿಯಲ್ಲಿ ಆಗಸ್ಟ್ 5ರಂದು ಸಂಭವಿಸಿದ ಪ್ರವಾಹದಲ್ಲಿ ರಾಹುಲ್ ಮುಖಿಯ, ಮುನ್ನಾ ಮುಖಿಯ ಮತ್ತು ರವಿ ಕುಮಾರ್ ಮೃತಪಟ್ಟಿದ್ದಾರೆ ಎಂಬುದಾಗಿ ಅವರ ಕುಟುಂಬಗಳು ಭಾವಿಸಿದ್ದವು. ಆದರೆ ಈಗ ಅವರು ಬಿಹಾರದ ಪಶ್ಚಿಮ ಚಂಪಾರಣ್ ನಲ್ಲಿರುವ ತಮ್ಮ ಮನೆಗಳಿಗೆ ಸುರಕ್ಷಿತವಾಗಿ ವಾಪಸಾಗಿದ್ದಾರೆ.

ವಾಸ್ತವವಾಗಿ, ಪ್ರವಾಹ ಸಂಭವಿಸಿದಾಗ ಅವರು ಊರಿನಲ್ಲೇ ಇರಲಿಲ್ಲ. ಮೂರು ದಿನಗಳ ಮೊದಲೇ ಅವರು ಕೆಲಸಕ್ಕಾಗಿ 6 ಕಿ.ಮೀ. ದೂರದ ಗಂಗೋತ್ರಿಗೆ ಹೋಗಿದ್ದರು. ಇದು ಮನೆಯವರಿಗೆ ತಿಳಿದಿರಲಿಲ್ಲ. ಸಂವಹನ ವ್ಯತ್ಯಯದಿಂದಾಗಿ ಅವರನ್ನು ಸಂಪರ್ಕಿಸಲು ಮನೆಯವರಿಗೆ ಸಾಧ್ಯವಾಗಿರಲಿಲ್ಲ.

ಸೇನೆಯು ಶೋಧ ಕಾರ್ಯದಲ್ಲಿ ತೊಡಗಿದ್ದಾಗ ಈ ಮೂವರು ಪತ್ತೆಯಾಗಿದ್ದಾರೆನ್ನಲಾಗಿದೆ. ಅವರನ್ನು ವಿಮಾನದ ಮೂಲಕ ಡೆಹ್ರಾಡೂನ್ಗೆ ತರಲಾಯಿತು. ಅಲ್ಲಿಂದ ಹರಿದ್ವಾರಕ್ಕೆ ತೆರಳಿದ ಅವರು ಅಂತಿಮವಾಗಿ ಬಿಹಾರದಲ್ಲಿರುವ ತಮ್ಮ ಹಳ್ಳಿಗೆ ಮರಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News