×
Ad

ಬಿಹಾರದ ಎಲ್ಲಾ 243 ಕ್ಷೇತ್ರಗಳಲ್ಲಿ ಮೋದಿ ಜೀವನಾಧಾರಿತ ಚಿತ್ರ ಪ್ರದರ್ಶನ: ಬಿಜೆಪಿ

Update: 2025-09-16 20:38 IST

PC : PTI 

ಪಾಟ್ನಾ, ಸೆ. 16: ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದ ಆಡಳಿತಾರೂಢ ಬಿಜೆಪಿಯು, ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಬೃಹತ್ ಸಿನೇಮಾ ಪರದೆಗಳುಳ್ಳ 243 ವ್ಯಾನ್‌ ಗಳನ್ನು ಕಳುಹಿಸಿಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯದ ಜೀವನ ಆಧಾರಿತ ‘ಚಲೋ ಜೀತೇ ಹೇಂ’ ಚಿತ್ರದ ಪ್ರದರ್ಶನಕ್ಕಾಗಿ ಈ ಏರ್ಪಾಡು ಮಾಡಲಾಗಿದೆ.

ಪ್ರಧಾನಿ ಮೋದಿ 75ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ, ‘‘ರಾಜಕೀಯದ ನಿಜವಾದ ಉದ್ದೇಶ ಸೇವೆ ಎನ್ನುವುದನ್ನು ಜನರಿಗೆ ಮನದಟ್ಟು ಮಾಡುವುದಕ್ಕಾಗಿ’’ ಪಾಟ್ನಾದ ಗಾಂಧಿ ಮೈದಾನದಿಂದ ಈ ‘‘ಸೇವಾ ರಥ’’ ವಾಹನಗಳನ್ನು ಕಳುಹಿಸಿಕೊಡಲಾಗಿದೆ ಎಂದು ಬಿಹಾರ ಬಿಜೆಪಿಯು ತನ್ನ ‘ಎಕ್ಸ್’ ಖಾತೆಯಲ್ಲಿ ಹೇಳಿದೆ.

‘‘ಮುಂಬರುವ ದಿನಗಳಲ್ಲಿ, ಈ ರಥಗಳು ಬಿಹಾರದ ಪ್ರತಿಯೊಂದು ಗ್ರಾಮ, ಪ್ರತಿಯೊಂದು ಬೀದಿ ಮತ್ತು ಪ್ರತಿಯೊಂದು ಸ್ಥಳಕ್ಕೆ ಹೋಗಿ, ‘ರಾಜಕೀಯದ ನಿಜವಾದ ಉದ್ದೇಶ ಕೇವಲ ಅಧಿಕಾರವಲ್ಲ, ಸಮಾಜಕ್ಕೆ ಸೇವೆ ಮಾಡುವುದು ಮತ್ತು ಕಟ್ಟ ಕಡೆಯ ವ್ಯಕ್ತಿಯಲ್ಲಿ ಬದಲಾವಣೆ ತರುವುದು ನಿಜವಾದ ಉದ್ದೇಶವಾಗಿದೆ’ ಎನ್ನುವುದನ್ನು ಜನರಿಗೆ ಮನದಟ್ಟು ಮಾಡುವುದು ಇದರ ಉದ್ದೇಶವಾಗಿದೆ’’ ಎಂದು ಬಿಜೆಪಿ ಹೇಳಿದೆ.

‘‘ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣಾದಾಯಕ ಬಾಲ್ಯ ಮತ್ತು ಹೋರಾಟ ಆಧಾರಿತ ‘ಚಲೋ ಜೀತೇ ಹೇಂ’ ಚಿತ್ರವನ್ನೂ ಬಿಹಾರದ ಎಲ್ಲಾ 243 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರದರ್ಶಿಸಲಾಗುವುದು. ಕಷ್ಟಗಳ ಹೊರತಾಗಿಯೂ ಸೇವೆ, ಹೋರಾಟ ಮತ್ತು ದೃಢನಿರ್ಧಾರದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯು ಸಮಾಜದ ನಿಜವಾದ ಸೇವಕ’ ಎನ್ನುವುದನ್ನು ಚಿತ್ರವು ಜನರಿಗೆ ಕಲಿಸಿಕೊಡುತ್ತದೆ’’ ಎಂದು ಅದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News