ಬಿಹಾರ | ಮೊದಲ ಹಂತದ ಚುನಾವಣೆ : 121 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಆರಂಭ
Update: 2025-10-10 22:04 IST
Photo Credit : PTI
ಪಾಟ್ನಾ,ಅ.10: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ನಡೆಯಲಿರುವ 121 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಶುಕ್ರವಾರ ಆರಂಭಗೊಂಡಿದೆ.
ಮೊದಲ ಹಂತದ ಮತದಾನವು ನವೆಂಬರ್ 6ರಂದು ನಡೆಯಲಿದೆ. ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಆಕ್ಟೋಬರ್ 17ರವರೆಗೂ ಸಲ್ಲಿಸಬಹುದಾಗಿದೆ ಹಾಗೂ ದಾಖಲೆಗಳ ಪರಿಶೀಲನೆಯನ್ನು ಮಾರನೆ ದಿನ ನಡೆಸಲಾಗುವುದು ಎಂದು ಅಧಿಸೂಚನೆ ನೀಡಿದೆ.
ಮೊದಲ ಹಂತದ ಚುನಾವಣೆಗೆ ನಾಮಪತ್ರಗಳ ಹಿಂತೆಗೆದುಕೊಳ್ಳಲು ಆಕ್ಟೋಬರ್ 20 ಕೊನೆಯ ದಿನವಾಗಿದೆ.
ಎರಡನೇ ಹಾಗೂ ಅಂತಿಮ ಹಂತದ ಚುನಾವಣೆ ನವೆಂಬರ್ 11ರಂದು ನಡೆಯಲಿದ್ದು, 122 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನವಾಗಲಿದೆ. ಮತ ಏಣಿಕೆಯು ನವೆಂಬರ್ 14ರಂದು ನಡೆಯಲಿದೆ.