×
Ad

ಬಿಹಾರ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ: ಅನುಮಾನಾಸ್ಪದ ನಾಗರಿಕತ್ವ ಹೊಂದಿರುವ 3 ಲಕ್ಷ ಮತದಾರರಿಗೆ ಚುನಾವಣಾ ಆಯೋಗದಿಂದ ನೋಟಿಸ್

Update: 2025-08-29 20:48 IST

ಚುನಾವಣಾ ಆಯೋಗ | PTI 

ಹೊಸದಿಲ್ಲಿ: ಬಿಹಾರದಲ್ಲಿ ಅನುಮಾನಾಸ್ಪದ ನಾಗರಿಕತ್ವ ಹೊಂದಿರುವ ಸುಮಾರು ಮೂರು ಲಕ್ಷ ಮತದಾರರಿಗೆ ಚುನಾವಣಾ ಆಯೋಗದ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರದಲ್ಲಿನ ಮೊದಲ ಹಂತದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಭಾಗವಾಗಿ ಆಗಸ್ಟ್ 1ರಂದು ಬಿಡುಗಡೆಯಾಗಿರುವ ಕರಡು ಮತಪಟ್ಟಿಯಲ್ಲಿರುವ 7.24 ಕೋಟಿ ಜನರ ಪೈಕಿ, ಈ ಮೂರು ಲಕ್ಷ ಮಂದಿ ಸೇರಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ, ನೋಟಿಸ್ ಜಾರಿಗೊಳಿಸಲಾಗಿರುವ ಮತದಾರರು ಬಾಂಗ್ಲಾದೇಶ, ನೇಪಾಳ, ಮಯನ್ಮಾರ್ ಹಾಗೂ ಅಫ್ಘಾನಿಸ್ತಾನಕ್ಕೂ ಸೇರಿರುವ ಪ್ರಜೆಗಳಾಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

ದಾಖಲೆಗಳ ಪರಿಶೀಲನೆಯ ವೇಳೆ ಮತದಾರರ ನೋಂದಣಾಧಿಕಾರಿಗಳ ಗಮನಕ್ಕೆ ಅಕ್ರಮಗಳು ಬಂದಿವೆ ಎಂದು ಹೇಳಲಾಗಿದೆ. ಬಳಿಕ ಕ್ಷೇತ್ರ ವಿಚಾರಣೆಯನ್ನು ನಡೆಸಲಾಗಿದ್ದು, ನೋಟಿಸ್ ಗಳನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮತದಾರರ ನೋಂದಣಾಧಿಕಾರಿಗಳು ಬಹುತೇಕ ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಮಧುಬನಿ, ಕೃಷ್ಣಗಂಜ್, ಪೂರ್ನಿಯಾ, ಕತಿಹಾರ್, ಅರಾರಿಯ ಹಾಗೂ ಸುಪೌಲ್ ನಲ್ಲಿ ಈ ನೋಟಿಸ್ ಗಳನ್ನು ಜಾರಿಗೊಳಿಸಿದ್ದಾರೆ.

“ಇಂತಹ ಬಹುತೇಕ ಪ್ರಕರಣಗಳನ್ನು ಈ ಜಿಲ್ಲೆಗಳಲ್ಲೇ ಪತ್ತೆ ಹಚ್ಚಲಾಗಿದೆ” ಎಂದು ಚುನಾವಣಾ ಆಯೋಗದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ, 7.24 ಕೋಟಿ ಮತದಾರರ ಪೈಕಿ ಶೇ. 99.11ರಷ್ಟು ಮತದಾರರು ತಮ್ಮ ದಾಖಲೆಗಳನ್ನು ಪರಿಶೀಲನೆಗಾಗಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

ನವೆಂಬರ್ ತಿಂಗಳಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಸೆಪ್ಟೆಂಬರ್ 30ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News