ಬಿಲ್ಕಿಸ್ ಬಾನು ಪ್ರಕರಣದ ವಿಚಾರಣೆ ಜು. 17ಕ್ಕೆ ಮುಂದೂಡಿಕೆ
Update: 2023-07-11 22:18 IST
Bilkis Bano | Photo: PTI
ಹೊಸದಿಲ್ಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಅವರ ಏಳು ಕುಟುಂಬ ಸದಸ್ಯರ ಹತ್ಯೆ ಪ್ರಕರಣದ ಎಲ್ಲಾ 11 ದೋಷಿಗಳನ್ನು ಅವಧಿಗೆ ಮುಂಚಿತವಾಗಿಯೇ ಜೈಲಿನಿಂದ ಬಿಡುಗಡೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಜುಲೈ 17ಕ್ಕೆ ಮುಂದೂಡಿದೆ.
2002ರ ಗುಜರಾತ್ ಗಲಭೆಯ ವೇಳೆ ಈ ಅತ್ಯಾಚಾರ ಮತ್ತು ಸಾಮೂಹಿಕ ಹತ್ಯಾಕಾಂಡ ನಡೆದಿತ್ತು.
ತನ್ನ ಮೇ 9ರ ಆದೇಶದ ಅನುಸಾರ, ದೋಷಿಗಳಿಗೆ ನೋಟಿಸ್ ಗಳನ್ನು ನೀಡಲು ಸಾಧ್ಯವಾಗದ ಕಾರಣ ಗುಜರಾತ್ನ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಪತ್ರಿಕೆಗಳಲ್ಲಿ ನೋಟಿಸ್ ಗಳನ್ನು ಪ್ರಕಟಿಸಲಾಗಿದೆ ಎನ್ನುವುದನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವೊಂದು ಖಚಿತಪಡಿಸಿತು.
ಬಳಿಕ, ಸಮಯದ ಕೊರತೆಯಿಂದಾಗಿ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿತು.