×
Ad

ಬಿಜೆಪಿ 8 ನೇ ಪಟ್ಟಿ ಬಿಡುಗಡೆ | ಪಟಿಯಾಲದಿಂದ ಪ್ರೀನಿತ್ ಕೌರ್, ಲುಧಿಯಾನದಿಂದ ರನ್ವೀತ್ ಸಿಂಗ್ ಬಿಟ್ಟು ಕಣಕ್ಕೆ

Update: 2024-03-30 23:01 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ 11 ಅಭ್ಯರ್ಥಿಗಳ ಬಿಜೆಪಿಯ 8 ನೇ ಪಟ್ಟಿ ಬಿಡುಗಡೆಯಾಗಿದ್ದು, ಐಪಿಎಸ್ ಗೆ ರಾಜಿನಾಮೆ ನೀಡಿದ ದೇಬಶಿಶ್ ಧಾರ್ ಅವರನ್ನು ಪಶ್ಚಿಮ ಬಂಗಾಳದ ಬಿರ್ಭೂಮ್‌ ಕ್ಷೇತ್ರದಿಂದ, ಕಾಂಗ್ರೆಸ್ ನಿಂದ ಅಮಾನತಾಗಿದ್ದ ಸಂಸದೆ ಪ್ರೀನಿತ್ ಕೌರ್ ಪಟಿಯಾಲದಿಂದ, ಲೋಕಸಭೆಯಲ್ಲಿ ಕಾಂಗ್ರೆಸ್ ವಿಪ್ ಆಗಿದ್ದ, ವಾರದ ಹಿಂದೆ ಬಿಜೆಪಿ ಸೇರಿದ್ದ ರನ್ವೀತ್ ಸಿಂಗ್ ಬಿಟ್ಟು ಲುಧಿಯಾನದಿಂದ ಕಣಕ್ಕಿಳಿದಿದ್ದಾರೆ.

2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಬಳಿಕ ಕೂಚ್‌ಬೆಹರ್‌ನ ಮಾಜಿ ಎಸ್ಪಿ ದೇಬಶಿರ್ ಧಾರ್ ಅಮಾನತಾಗಿದ್ದರು. ಈ ಜಿಲ್ಲೆಯ ಸಿತಾಲ್ಕುಚಿಯಲ್ಲಿ ನಾಲ್ವರು ಕೇಂದ್ರ ಪಡೆಗಳ ಗುಂಡಿನ ದಾಳಿಗೆ ಬಲಿಯಾಗಿದ್ದರು.

ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 2022 ರಲ್ಲಿ ಪಶ್ಚಿಮ ಬಂಗಾಳದ ಸಿಐಡಿ ದೇಬಶಿರ್ ಧಾರ್ ಮೇಲೆ ದಾಳಿ ನಡೆಸಿತು. ಸಾಲ್ಟ್ ಲೇಕ್, ಮೆಟ್ರೋಪಾಲಿಟನ್ ಸೊಸೈಟಿ ಮತ್ತು ಜೋಧ್‌ಪುರ ಪಾರ್ಕ್‌ನಲ್ಲಿರುವ ಧಾರ್ ಮತ್ತು ಉದ್ಯಮಿ ಸುದೀಪ್ತೋ ರಾಯ್‌ಚೌಧರಿ ಅವರ ನಿವಾಸ ಸೇರಿದಂತೆ ಐದು ಆಸ್ತಿಗಳ ಮೇಲೆ ದಾಳಿ ನಡೆಸಲಾಗಿತ್ತು. 2015 ರಿಂದ 2018 ರವರೆಗೆ ಧಾರ್ ಅವರ ಆಸ್ತಿಗಳಿಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿತ್ತು ಎಂಬ ಆರೋಪವಿದೆ.

2011 ಮತ್ತು 2013 ರ ನಡುವೆ ಸಿಬಿಐನೊಂದಿಗೆ ಕೆಲಸ ಮಾಡಿದ ಧಾರ್ ಅವರು ಬಿರ್ಭೂಮ್‌ ನಲ್ಲಿ ಟಿಎಂಸಿಯ ಪ್ರಬಲ ಅಭ್ಯರ್ಥಿ ಅನುಬ್ರತಾ ಮೊಂಡಲ್ ಅವರನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News