×
Ad

ಬಿಜೆಪಿ ನನಗೆ ಹೆದರಿದೆ; ಆದುದರಿಂದ ನನ್ನನ್ನು ಜೈಲಿಗೆ ಕಳುಹಿಸಿದೆ: ಕೇಜ್ರಿವಾಲ್

Update: 2024-05-14 22:02 IST

ಅರವಿಂದ ಕೇಜ್ರಿವಾಲ್ \ PC: PTI 

ಮುಂಬೈ: ಬಿಜೆಪಿ ನನಗೆ ಹೆದರಿದೆ. ಆದುದರಿಂದ ಅದು ನನ್ನನ್ನು ಜೈಲಿಗೆ ಕಳುಹಿಸಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ.

ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಸುಶೀಲ್ ಗುಪ್ತಾ ಅವರ ಪರವಾಗಿ ಕುರುಕ್ಷೇತ್ರದ ಪಿಹೋವದಲ್ಲಿ ಮಂಗಳವಾರ ನಡೆದ ರೋಡ್ ಶೋದಲ್ಲಿ ಅರವಿಂದ ಕೇಜ್ರಿವಾಲ್ ಅವರು ಪಾಲ್ಗೊಂಡರು. ಈ ಸಂದರ್ಭ ಅವರೊಂದಿಗೆ ಸುಶೀಲ್ ಗುಪ್ತಾ ಕೂಡ ಇದ್ದರು.

ರೋಡ್ ಶೋ ಬಳಿಕ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮಾರ್ಚ್ 16ರಂದು ಚುನಾವಣೆ ಘೋಷಿಸಲಾಯಿತು. ಮಾರ್ಚ್ 21ರಂದು ಅವರು ನನ್ನನ್ನು ಜೈಲಿಗೆ ಕಳುಹಿಸಿದರು. ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರ ಮಾಡಬಾರದು ಎಂಬುದು ಇದರ ಅರ್ಥ. ಅವರು ಕೇಜ್ರಿವಾಲ್ ಗೆ ಹೆದರಿದ್ದಾರೆ ಎಂದರು.

ನನಗೆ ಪಿಹೋವದೊಂದಿಗೆ ಸಂಬಂಧ ಇದೆ. ನೀವು ಹೇಗೆ ಎಂದು ಕೇಳಬಹುದು. ನನ್ನ ಕಿರಿಯ ಸಹೋದರನ ಮಾವ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪಿಹೋವದವರು. ಅವರ (ಮಾನ್) ಮಾವ ಇಂದ್ರಜಿತ್ ಸಿಂಗ್ ಕೂಡ ಇಂದು ನಮ್ಮೊಂದಿಗೆ ಇದ್ದಾರೆ. ಅವರು ಕೂಡ ಇಲ್ಲಿನವರು. ನನ್ನನ್ನು ಜೈಲಿಗೆ ಕಳುಹಿಸಿದ ಬಿಜೆಪಿಗೆ ಇಲ್ಲಿಂದ ಒಂದೇ ಒಂದು ಮತ ಬೀಳಬಾರದು ಎಂದು ಅವರು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News