×
Ad

ಅಗತ್ಯ ವಸ್ತುಗಳ ಬೆಲೆ ಶೇ.50 ಇಳಿಕೆ ಎಂಬ ಹೇಳಿಕೆ ನೀಡಿ ಟ್ರೋಲ್‌ಗೆ ಗುರಿಯಾದ ಬಿಜೆಪಿ ಸಂಸದ ರವಿ ಕಿಶನ್

ಮಹಾನ್ ಗಣಿತ ತಜ್ಞ ಎಂದ ಜನರು

Update: 2025-09-24 16:08 IST

ರವಿ ಕಿಶನ್ (Photo: PTI)

ಹೊಸದಿಲ್ಲಿ: ಕೇಂದ್ರ ಸರ್ಕಾರ ಜಿಎಸ್‌ಟಿ ಸರಳೀಕರಣದ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಶೇ.50ರಷ್ಟು ಇಳಿದಿವೆ ಎಂದು ಬಿಜೆಪಿ ಸಂಸದ ರವಿ ಕಿಶನ್ ಹೇಳಿಕೆ ನೀಡಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ರೋಲ್‌ಗೆ ಗುರಿಯಾಗಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕಿಶನ್ ಅವರು, “ಬಟ್ಟೆ, ಟಿವಿ, ಫ್ರಿಜ್, ಶಾಂಪೂ, ವಾಷಿಂಗ್ ಮೆಷಿನ್ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆ ಶೇ.50ರಷ್ಟು ಕಡಿಮೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನವರಾತ್ರಿ ಹಬ್ಬದ ಅಂಗವಾಗಿ ದೇಶದ ಜನತೆಗೆ ವಿಶಿಷ್ಟ ಉಡುಗೊರೆಯನ್ನು ನೀಡಿದ್ದಾರೆ. ಮೋದಿಗೆ ಮತ ಹಾಕದವರಿಗೂ ಇದರ ಲಾಭ ಸಿಕ್ಕಿದೆ. ಮೂರನೇ ಅವಧಿಗೆ ಮೋದಿ ಪ್ರಧಾನಿಯಾಗಿರುವುದು ಸಂತಸದ ಸಂಗತಿ” ಎಂದು ಹೇಳಿದ್ದಾರೆ.

ಈ ಹೇಳಿಕೆ ಸಾಮಾಜಿಕ ಮಾಧ್ಯಮ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವರು ಕಿಶನ್ ಅವರನ್ನು “ಮಹಾನ್ ಗಣಿತ ತಜ್ಞ” ಎಂದು ವ್ಯಂಗ್ಯವಾಡಿದ್ದಾರೆ.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಈ ವಿಡಿಯೊವನ್ನು ಹಂಚಿಕೊಂಡು, “ಬಿಜೆಪಿ ನಾಯಕರು ನಿರಂತರ ಸುಳ್ಳು ಹೇಳುವುದರಲ್ಲಿ ದಾಖಲೆ ಬರೆದಿದ್ದಾರೆ” ಎಂದು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News