Blood Sugar ಪ್ರಮಾಣವನ್ನು ಏರಿಸದ 6 ಹಣ್ಣುಗಳು ಯಾವುವು ಗೊತ್ತೇ?
ಸಾಂದರ್ಭಿಕ ಚಿತ್ರ | Photo Credit : freepik
ಹಣ್ಣುಗಳು ಮಧುಮೇಹಿಗಳಿಗೆ ಶತ್ರುಗಳಲ್ಲ. ಕೆಲವು ಹಣ್ಣುಗಳನ್ನು ಜಾಣತನದಿಂದ ಮತ್ತು ಸಮತೋಲನದಲ್ಲಿ ಸೇವಿಸಿದರೆ, ಅವು ನಿತ್ಯ ಆಹಾರದ ಭಾಗವಾಗಿ ರಕ್ತದಲ್ಲಿನ ಸಕ್ಕರೆಯ ಆರೋಗ್ಯಕರ ಪ್ರಮಾಣವನ್ನು ಕಾಪಾಡಲು ನೆರವಾಗುತ್ತವೆ.
ಎಲ್ಲಾ ಹಣ್ಣುಗಳೂ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಸುತ್ತವೆ ಎಂದು ಭಾವಿಸುವವರು ಹೆಚ್ಚು. ಆದರೆ ಅದು ಸಂಪೂರ್ಣವಾಗಿ ನಿಜವಲ್ಲ. ಕೆಲವು ಹಣ್ಣುಗಳನ್ನು ಜಾಣತನದಿಂದ ಹಾಗೂ ಮಿತಿಯೊಳಗೆ ಸೇವಿಸಿದಲ್ಲಿ, ಅವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವುದಿಲ್ಲ.
ತಜ್ಞರ ಪ್ರಕಾರ, ಹಣ್ಣುಗಳು ನೈಸರ್ಗಿಕ ಸಕ್ಕರೆಗಳು, ಫೈಬರ್, ವಿಟಮಿನ್‌ಗಳು, ಖನಿಜಗಳು ಮತ್ತು anti ಆಕ್ಸಿಡೆಂಟ್ ಗಳ ಉತ್ತಮ ಮೂಲವಾಗಿವೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕೆಲವು ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಆದರೆ ಸರಿಯಾದ ಹಣ್ಣುಗಳ ಆಯ್ಕೆ ಮತ್ತು ಸಮತೋಲಿತ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ.
ಹಾಗಾದರೆ ಜಾಣತನದಿಂದ ಸೇವಿಸಬೇಕಾದ ಹಣ್ಣುಗಳು ಯಾವುವು?
►ಸೇಬು: ಹೊರಪದರದ ಸಮೇತ ಸೇವಿಸಿದರೆ ಹೆಚ್ಚಿನ ಫೈಬರ್ ಸಿಗುತ್ತದೆ. ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಪಾಲಿಫಿನಾಲ್‌ಗಳು ಇವುಗಳಲ್ಲಿ ಇದ್ದು, ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಕೆಯನ್ನು ನಿಧಾನಗೊಳಿಸುತ್ತವೆ.
►ಬೆಣ್ಣೆಹಣ್ಣು: ಆರೋಗ್ಯಕರ ಕೊಬ್ಬು ಮತ್ತು ಫೈಬರ್ ಹೊಂದಿರುವ ಹಣ್ಣು. ಹೀಗಾಗಿ ಗ್ಲುಕೋಸ್ ಮಟ್ಟವನ್ನು ಸ್ಥಿರಗೊಳಿಸಲು ನೆರವಾಗುತ್ತದೆ.
►ಬ್ಲೂಬೆರಿಗಳು: ಜೀವಕೋಶಗಳು ಇನ್ಸುಲಿನ್‌ಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಸುಧಾರಿಸುವ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತವೆ.
►ಗ್ರೇಪ್‌ಫ್ರೂಟ್: ಇದರಲ್ಲಿ ನಾರಿಂಜೆನಿನ್ (ಸಿಟ್ರಸ್ ಹಣ್ಣುಗಳಲ್ಲಿ ಕಂಡುಬರುವ ನೈಸರ್ಗಿಕ ಫ್ಲೇವನಾಯ್ಡ್) ಇರುತ್ತದೆ. ಇದು ಇನ್ಸುಲಿನ್ ಕ್ರಿಯೆಯನ್ನು ಸುಧಾರಿಸುವ ನೈಸರ್ಗಿಕ ಸಂಯುಕ್ತ.
►ಕಿತ್ತಳೆ ಹಣ್ಣು: ಫೈಬರ್ ಮತ್ತು ವಿಟಮಿನ್ ಸಿ ಹೊಂದಿದ್ದು, ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುತ್ತದೆ. ಆದರೆ ಕಿತ್ತಳೆ ಹಣ್ಣಿನ ರಸದಲ್ಲಿ ಈ ಲಾಭಗಳು ಇರುವುದಿಲ್ಲ.
►ಹಸಿರು ಸೇಬು: ಕಡಿಮೆ ಸಕ್ಕರೆ ಹೊಂದಿರುವ ಉತ್ತಮ ಆಯ್ಕೆ. ಸಕ್ಕರೆ ಪ್ರಮಾಣ ಹೆಚ್ಚಿಸದೆ ಹಸಿವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.
►ಹಾಗಾದರೆ ಈ ಹಣ್ಣುಗಳು ಮಧುಮೇಹಿಗಳಿಗೆ ಸಂಪೂರ್ಣವಾಗಿ ಉತ್ತಮವೇ?
ಎಲ್ಲವೂ ಸಮತೋಲನದ ವಿಷಯ. ಮಧುಮೇಹಿಗಳು ಹಣ್ಣಿನ ರಸಗಳು ಮತ್ತು ಒಣ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬಾರದು. ಅವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತ್ವರಿತವಾಗಿ ಏರಿಸಬಹುದು. ಆದರೆ ತಾಜಾ ಹಣ್ಣುಗಳನ್ನು—ವಿಶೇಷವಾಗಿ ಹೆಚ್ಚಿನ ಫೈಬರ್ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಹಣ್ಣುಗಳನ್ನು—ಸಾಧಾರಣ ಪ್ರಮಾಣದಲ್ಲಿ ಸೇವಿಸಬಹುದು.
ಹಣ್ಣುಗಳನ್ನು ಪ್ರೋಟೀನ್ ಅಥವಾ ಕೊಬ್ಬಿನ ಅಂಶಗಳ ಜೊತೆಗೆ ಸೇರಿಸಿ ಸೇವಿಸಿದರೆ, ಗ್ಲುಕೋಸ್ ಏರಿಕೆಯನ್ನು ಮತ್ತಷ್ಟು ಕಡಿಮೆಗೊಳಿಸಬಹುದು.
ಹೀಗಾಗಿ, ಹಣ್ಣುಗಳು ಶತ್ರುಗಳಲ್ಲ. ಕೆಲವು ಹಣ್ಣುಗಳನ್ನು ಜಾಣತನದಿಂದ ಹಾಗೂ ಸಮತೋಲನದಲ್ಲಿ ಸೇವಿಸಿದರೆ, ಅವು ನಿತ್ಯ ಆಹಾರದ ಭಾಗವಾಗಿ ರಕ್ತದಲ್ಲಿನ ಸಕ್ಕರೆಯ ಆರೋಗ್ಯಕರ ಪ್ರಮಾಣಕ್ಕೆ ಬೆಂಬಲ ನೀಡುತ್ತವೆ.