ಮೊಝಾಂಬಿಕ್ ಕರಾವಳಿಯಲ್ಲಿ ದೋಣಿ ದುರಂತ : ಮೂವರು ಭಾರತೀಯರು ಮೃತ್ಯು; ಐವರು ನಾಪತ್ತೆ
Update: 2025-10-18 10:53 IST
ಸಾಂದರ್ಭಿಕ ಚಿತ್ರ | ndtv
ಹೊಸ ದಿಲ್ಲಿ: ದೋಣಿ ಮಗುಚಿಬಿದ್ದ ಪರಿಣಾಮ ಕನಿಷ್ಠ ಮೂವರು ಭಾರತೀಯರು ಮೃತಪಟ್ಟು, ಐವರು ನಾಪತ್ತೆಯಾಗಿರುವ ಘಟನೆ ಕೇಂದ್ರ ಮೊಝಾಂಬಿಕ್ ನ ಬೈರಾ ಬಂದರಿನ ಕರಾವಳಿ ಸಮೀಪ ನಡೆದಿದೆ ಎಂದು ಭಾರತೀಯ ಹೈಕಮಿಷನ್ ತಿಳಿಸಿದೆ.
ಸಮುದ್ರ ತೀರದ ಬಳಿ ಲಂಗರು ಹಾಕಿದ್ದ ಟ್ಯಾಂಕರ್ ಒಂದಕ್ಕೆ ದೈನಂದಿನ ಕಾರ್ಯದಂತೆ ಸಿಬ್ಬಂದಿಗಳನ್ನು ಸ್ಥಳಾಂತರಿಸುವಾಗ ಈ ದುರಂತ ಸಂಭವಿಸಿದೆ.
ದೋಣಿ ಮಗುಚಿ ಬಿದ್ದಾಗ, ಅದರಲ್ಲಿ 14 ಮಂದಿ ಭಾರತೀಯ ಪ್ರಜೆಗಳಿದ್ದರು ಎನ್ನಲಾಗಿದೆ. ದೋಣಿ ಮಗುಚಿಕೊಳ್ಳಲು ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ದೋಣಿ ದುರಂತದಲ್ಲಿ ಐವರನ್ನು ರಕ್ಷಿಸಲಾಗಿದ್ದು, ಅವರೆಲ್ಲ ಸುರಕ್ಷಿತವಾಗಿದ್ದಾರೆ. ಈ ಪೈಕಿ ಓರ್ವ ವ್ಯಕ್ತಿಗೆ ಬೈರಾ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಾರತೀಯ ಹೈಕಮಿಷನ್ ದೃಢಪಡಿಸಿದೆ.