×
Ad

ಹರ್ಯಾಣ: ನಾಲೆಯಲ್ಲಿ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಪತ್ತೆ

Update: 2024-01-13 12:29 IST

ದಿವ್ಯಾ ಪಹುಜಾ (Photo: NDTV)

ಗುರುಗ್ರಾಮ (ಹರ್ಯಾಣ): ಜನವರಿ 3ರಂದು ಗುರುಗ್ರಾಮದ ಹೋಟೆಲೊಂದರಲ್ಲಿ ಸಂಶಯಾಸ್ಪದ ಸನ್ನಿವೇಶದಲ್ಲಿ ಹತ್ಯೆಗೀಡಾಗಿದ್ದ 27 ವರ್ಷದ ಮಾಜಿ ರೂಪದರ್ಶಿ ದಿವ್ಯಾ ಪಹುಜಾರ ಮೃತದೇಹ ಹರ್ಯಾಣದ ತೋಹ್ನಾದಲ್ಲಿನ ನಾಲೆಯೊಂದರಲ್ಲಿ ಪತ್ತೆಯಾಗಿದೆ.

ಗುರುಗ್ರಾಮ ಪೊಲೀಸರ ಪ್ರಕಾರ, ಪಹುಜಾರ ಮೃತದೇಹದ ಭಾವಚಿತ್ರವನ್ನು ಅವರ ಕುಟುಂಬದ ಸದಸ್ಯರಿಗೆ ರವಾನಿಸಿದಾಗ, ಅವರು ಆಕೆಯ ಮೃತದೇಹವನ್ನು ಗುರುತಿಸಿದರು ಎಂದು ಹೇಳಿದ್ದಾರೆ.

ಪಹುಜಾರ ಮೃತದೇಹವನ್ನು ಪತ್ತೆ ಹಚ್ಚಲು ಗುರುಗ್ರಾಮ ಪೊಲೀಸರ ಆರು ತಂಡಗಳನ್ನು ರಚಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News