×
Ad

ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಕ್ಕೆ ರಾಮ್‌ದೇವ್‌ ಎಕ್ಸ್‌ನಲ್ಲಿ ನಿರ್ಬಂಧಿಸಿದ್ದಾರೆ ಎಂದ ಮಿಲಿಯನೇರ್ ಬ್ರಿಯಾನ್ ಜಾನ್ಸನ್

Update: 2025-02-19 18:29 IST

ಮಿಲಿಯನೇರ್ ಬ್ರಿಯಾನ್ ಜಾನ್ಸನ್ , ರಾಮ್‌ದೇವ್‌| PC : X \ @bryan_johnson

ಹೊಸದಿಲ್ಲಿ : ʼಕುದುರೆಯಂತೆ ವೇಗವಾಗಿ ಓಡಲುʼ ಮತ್ತು ʼಯೌವನದಿಂದಿರಲುʼ ಪತಂಜಲಿ ಉತ್ಪನ್ನಗಳನ್ನು ತೆಗೆದುಕೊಳ್ಳಿ ಎಂದು ಪ್ರಚಾರ ಮಾಡಿದ್ದ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಕ್ಕೆ ಯೋಗ ಗುರು ಮತ್ತು ಪತಂಜಲಿ ಸಂಸ್ಥಾಪಕ ರಾಮ್‌ದೇವ್‌ ಎಕ್ಸ್‌ನಲ್ಲಿ ನಿರ್ಬಂಧಿಸಿದ್ದಾರೆ(ಬ್ಲಾಕ್ ಮಾಡಿದ್ದಾರೆ) ಎಂದು ಅಮೆರಿಕ ಮೂಲದ ಉದ್ಯಮಿ, ಏಜ್-ರಿವರ್ಸಿಂಗ್(Age-reversing) CEO ಮಿಲಿಯನೇರ್ ಬ್ರಿಯಾನ್ ಜಾನ್ಸನ್ ಹೇಳಿದ್ದಾರೆ.    

'ಸ್ವರ್ಣ ಶಿಲಾಜಿತ್'(Swarna Shilajit) ಮತ್ತು 'ಇಮ್ಯುನೊಗ್ರಿಟ್ ಗೋಲ್ಡ್(Immunogrit Gold) ಉತ್ಪನ್ನದ ಪ್ರಚಾರದ ವೀಡಿಯೊದಲ್ಲಿ ರಾಮ್ ದೇವ್ ಕುದುರೆ ಜೊತೆ ಓಡುತ್ತಿರುವುದು ಕಂಡು ಬಂದಿದೆ. ರಾಮ್‌ದೇವ್‌ ಹಿಂದಿಯಲ್ಲಿ ಬರೆದಿರುವ ಪೋಸ್ಟ್ ನಲ್ಲಿ, ಜನರು ಕುದುರೆಯಂತೆ ವೇಗವಾಗಿ ಓಡಲು ಮತ್ತು ಯೌವನದಿಂದಿರಲು ಪತಂಜಲಿಯ ಉತ್ಪನ್ನಗಳನ್ನು ತೆಗೆದುಕೊಳ್ಳಿ, ಈ ಉತ್ಪನ್ನಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಶಕ್ತಿಯನ್ನು ವೃದ್ಧಿಸುತ್ತದೆ, ಯೌವ್ವನವನ್ನು ಕಾಯ್ದುಕೊಂಡು ಬೇಗನೆ ಮುಪ್ಪಾಗುವುದನ್ನು ತಡೆಯುತ್ತದೆ ಎಂದು ಹೇಳಿದ್ದರು.

ರಾಮ್‌ದೇವ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬ್ರಿಯಾನ್ ಜಾನ್ಸನ್, ಹರಿದ್ವಾರದ ಪತಂಜಲಿಯ ಪ್ರಧಾನ ಕಚೇರಿಯಲ್ಲಿನ ಗಾಳಿಯ ಗುಣಮಟ್ಟವು ಬಹಳ ಕಳಪೆಯಾಗಿದೆ. ನಗರದಲ್ಲಿ ಉಸಿರಾಡುವುದರಿಂದ ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳ ಅಪಾಯ ಹೆಚ್ಚಿದೆ. ಹರಿದ್ವಾರದಲ್ಲಿ ಗಾಳಿಯ ಗುಣಮಟ್ಟ PM 2.5 36 µg/m³ ವರೆಗಿದೆ. ಇದು ದಿನಕ್ಕೆ 1.6 ಸಿಗರೇಟ್ ಸೇದುವುದಕ್ಕೆ ಸಮಾನವಾಗಿದೆ. ಇದು 40 ರಿಂದ 50% ಹೃದ್ರೋಗದ ಅಪಾಯವನ್ನು ಹೊಂದಿದೆ. ಶ್ವಾಸಕೋಶದ ಕ್ಯಾನ್ಸರ್ ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯ ಅಪಾಯ ಹೊಂದಿದೆ ಎಂದು ಹೇಳಿದ್ದಾರೆ.

ಇದರ ಬೆನ್ನಲ್ಲೇ ಎಕ್ಸ್‌ನಲ್ಲಿ ಮತ್ತೊಂದು ಪೋಸ್ಟ್ ಮಾಡಿದ ಜಾನ್ಸನ್, ರಾಮ್‌ದೇವ್‌ ಅವರು ಎಕ್ಸ್‌ನಲ್ಲಿ ನಿರ್ಬಂಧಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News