‘‘ಗುಡ್ ಬೈ ಇಂಡಿಯಾ’’ ಎಂದು ಹೇಳಿ ಹೋದ ಬ್ರಿಟನ್ ಪ್ರಜೆ
Update: 2025-06-12 23:03 IST
PC : @RT_India_news
ಹೊಸದಿಲ್ಲಿ, ಜೂ. 12: ಏರ್ ಇಂಡಿಯಾ ವಿಮಾನ ಪತನಗೊಳ್ಳುವ ಮುನ್ನ ಬ್ರಿಟನ್ ಪ್ರಜೆ ಜಾಮಿ ರೇ ಮೀಕ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.
ಈ ವೀಡಿಯೊದಲ್ಲಿ ಜಾಮಿ ರೇ ಮೀಕ್ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಮುಗುಳ್ನಗುತ್ತಾ ‘‘ಗುಡ್ ಬೈ ಇಂಡಿಯಾ’’ ಎಂದು ಹೇಳುತ್ತಿರುವುದು ಸೆರೆಯಾಗಿದೆ.
ನಾವು ವಿಮಾನ ನಿಲ್ದಾಣದಲ್ಲಿ ಈಗಷ್ಟೇ ವಿಮಾನ ಹತ್ತಿದ್ದೇವೆ. ಲಂಡನ್‌ಗೆ ತೆರಳುವ 10 ತಾಸುಗಳ ಪ್ರಯಾಣದೊಂದಿಗೆ ಭಾರತಕ್ಕೆ ಗುಡ್ ಬೈ ಎಂದು ಮೀಕ್ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.