×
Ad

ಬಜೆಟ್ 2024-25 : ಸ್ವಂತ ಮನೆಗಳ ಖರೀದಿ ಅಥವಾ ನಿರ್ಮಾಣಕ್ಕೆ ಮಧ್ಯಮ ವರ್ಗಕ್ಕೆ ನೆರವಾಗಲು ಯೋಜನೆ : ಕೇಂದ್ರ ವಿತ್ತಸಚಿವೆ

Update: 2024-02-01 20:24 IST

ನಿರ್ಮಲಾ ಸೀತಾರಾಮನ್ | Photo: PTI 

ಹೊಸದಿಲ್ಲಿ : ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಮಧ್ಯಮ ವರ್ಗಗಳ ಜನರನ್ನು ಓಲೈಸುವ ಪ್ರಯತ್ನವಾಗಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬಾಡಿಗೆ ಮನೆಗಳಲ್ಲಿ ಅಥವಾ ಕೊಳಗೇರಿಗಳಲ್ಲಿ ವಾಸವಾಗಿರುವವರು ತಮ್ಮ ಸ್ವಂತ ಮನೆಗಳನ್ನು ಹೊಂದಲು ನೆರವಾಗಲು ಯೋಜನೆಯೊಂದನ್ನು ಗುರುವಾರ ಪ್ರಕಟಿಸಿದರು.

ಮುಂದಿನ ಐದು ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ಯಡಿ ಗ್ರಾಮೀಣ ಬಡವರಿಗಾಗಿ ಇನ್ನೂ ಎರಡು ಕೋಟಿ ಪಕ್ಕಾಮನೆಗಳನ್ನು ನಿರ್ಮಿಸಲಾಗುವುದು ಎಂದೂ ಅವರು ತನ್ನ ಮಧ್ಯಂತರ ಬಜೆಟ್ ಭಾಷಣದಲ್ಲಿ ಪ್ರಕಟಿಸಿದರು.

ಮೋದಿ ಸರಕಾರವು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ಭಾಗವಾಗಿ ಕಳೆದ 10 ವರ್ಷಗಳಲ್ಲಿ ಪ್ರತಿಯೊಬ್ಬರಿಗೂ ಮನೆ, ನೀರು, ವಿದ್ಯುತ್, ಅಡಿಗೆ ಅನಿಲ ಮತ್ತು ಬ್ಯಾಂಕ್ ಖಾತೆಯನ್ನು ಒದಗಿಸಲು ಶ್ರಮಿಸಿದೆ ಎಂದು ಹೇಳಿದ ಅವರು, ‘ನಮ್ಮ ಸರಕಾರವು ಬಾಡಿಗೆ ಮನೆಗಳು ಅಥವಾ ಕೊಳಗೇರಿಗಳಲ್ಲಿ ವಾಸವಿರುವ ಮಧ್ಯಮ ವರ್ಗದ ಅರ್ಹ ಜನರಿಗೆ ತಮ್ಮ ಸ್ವಂತ ಮನೆಗಳನ್ನು ಖರೀದಿಸಲು ಅಥವಾ ನಿರ್ಮಿಸಲು ನೆರವಾಗುವ ಉದ್ದೇಶದಿಂದ ಯೋಜನೆಯೊಂದನ್ನು ಆರಂಭಿಸಲಿದೆʼ ಎಂದು ತಿಳಿಸಿದರು.

‘ಕೋವಿಡ್ ಸಾಂಕ್ರಾಮಿಕವು ಉಂಟು ಮಾಡಿದ್ದ ಅಡೆತಡೆಗಳ ಹೊರತಾಗಿಯೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅನುಷ್ಠಾನವು ಮುಂದುವರಿದಿದೆ. ಮೂರು ಕೋಟಿ ಮನೆಗಳ ನಿರ್ಮಾಣದ ಗುರಿ ಸಾಧನೆಯನ್ನು ನಾವು ಸಮೀಪಿಸಿದ್ದೇವೆ. ಕುಟುಂಬಗಳ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ ಹೆಚ್ಚುತ್ತಿರುವ ಅಗತ್ಯವನ್ನು ಪೂರೈಸಲು ನಾವು ಮುಂದಿನ ಐದು ವರ್ಷಗಳಲ್ಲಿ ಇನ್ನೂ ಎರಡು ಕೋಟಿ ಮನೆಗಳನ್ನು ನಿರ್ಮಿಸಲಿದ್ದೇವೆ’ ಎಂದು ಸೀತಾರಾಮನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News