×
Ad

ಆದಿವಾಸಿ ಯುವಕನ ಮೇಲೆ ಮೂತ್ರವಿಸರ್ಜಿಸಿದ ವ್ಯಕ್ತಿಯ ವಿರುದ್ಧ ಬುಲ್‌ಡೋಝರ್ ಕಾರ್ಯಾಚರಣೆ

ಬುಧವಾರ ಹಲವಾರು ಅಧಿಕಾರಿಗಳು ಹಾಗೂ ಪೊಲೀಸ್‌ ಸಿಬ್ಬಂದಿಗಳು ಜೆಸಿಬಿ ಯಂತ್ರದೊಂದಿಗೆ ಶುಕ್ಲಾ ನಿವಾಸಕ್ಕೆ ಆಗಮಿಸಿ ಒತ್ತುವರಿ ಮಾಡಲಾಗಿದೆ ಎಂದು ತಿಳಿಯಲಾದ ಭಾಗಗಳನ್ನು ನೆಲಸಮಗೊಳಿಸಿದ್ದಾರೆ.

Update: 2023-07-05 17:28 IST

Photo: Twitter

ಭೋಪಾಲ್: ಆದಿವಾಸಿ ಯುವಕನೊಬ್ಬನ ಮೇಲೆ ಮೂತ್ರವಿಸರ್ಜನೆಗೈದ ವ್ಯಕ್ತಿಯೊಬ್ಬನ ಒಡೆತನದ ಕಟ್ಟಡದ ಕೆಲ ಭಾಗಗಳನ್ನು ಮಧ್ಯಪ್ರದೇಶದ ಆಡಳಿತ ಬುಧವಾರ ನೆಲಸಮಗೊಳಿಸಿ ಬುಲ್‌ಡೋಝರ್‌ ಕಾರ್ಯಾಚರಣೆ ನಡೆಸಿದೆ.

ಸಿಧಿ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯ ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ ಆರೋಪಿ ಬಿಜೆಪಿ ನಾಯಕ ಎನ್ನಲಾದ ಪ್ರವೇಶ್‌ ಶುಕ್ಲಾ ಎಂಬಾತನನ್ನು ಮಂಗಳವಾರ ರಾತ್ರಿ ಬಂಧಿಸಲಾಗಿತ್ತು.

ಬುಧವಾರ ಹಲವಾರು ಅಧಿಕಾರಿಗಳು ಹಾಗೂ ಪೊಲೀಸ್‌ ಸಿಬ್ಬಂದಿಗಳು ಜೆಸಿಬಿ ಯಂತ್ರದೊಂದಿಗೆ ಶುಕ್ಲಾ ನಿವಾಸಕ್ಕೆ ಆಗಮಿಸಿ ಒತ್ತುವರಿ ಮಾಡಲಾಗಿದೆ ಎಂದು ತಿಳಿಯಲಾದ ಭಾಗಗಳನ್ನು ನೆಲಸಮಗೊಳಿಸಿದ್ದಾರೆ.

ಪಾಲೆ ಕೋಲ್‌ ಎಂಬ ಆದಿವಾಸಿ ಸಮುದಾಯದ ಕಾರ್ಮಿಕನ ಮೇಲೆ ಶುಕ್ಲಾ ಮೂತ್ರವಿಸರ್ಜಿಸುತ್ತಿರುವ ವೀಡಿಯೋ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News