ರಾಜಸ್ಥಾನದಲ್ಲಿ ಬಸ್ ಬೆಂಕಿಗಾಹುತಿ: 19 ಮಂದಿ ಸಜೀವ ದಹನ
Photo Credit : NDTV
ಜೈಪುರ: ಮಂಗಳವಾರ ಜೈಸಲ್ಮೇರ್‌ನಿಂದ ಜೋಧಪುರಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿದ್ದು,19 ಜನರು ಸಜೀವ ದಹನಗೊಂಡಿದ್ದಾರೆ ಎಂದು ಪೋಲಿಸರು ತಿಳಿಸಿದರು.
57 ಪ್ರಯಾಣಿಕರಿದ್ದ ಬಸ್ ಅಪರಾಹ್ನ ಮೂರು ಗಂಟೆಗೆ ಜೈಸಲ್ಮೇರ್‌ನಿಂದ ನಿರ್ಗಮಿಸಿತ್ತು. ಜೈಸಲ್ಮೇರ್-ಜೋಧಪುರ ಹೆದ್ದಾರಿಯಲ್ಲಿ ಬಸ್‌ನ ಹಿಂಭಾಗದಿಂದ ಹೊಗೆ ಬರತೊಡಗಿತ್ತು. ಚಾಲಕ ತಕ್ಷಣ ಬಸ್ ಅನ್ನು ರಸ್ತೆಬದಿಗೆ ನಿಲ್ಲಿಸಿದರೂ ಕೆಲವೇ ಕ್ಷಣಗಳಲ್ಲಿ ಬೆಂಕಿಯ ಜ್ವಾಲೆಗಳು ಇಡೀ ಬಸ್ ಅನ್ನು ಆವರಿಸಿಕೊಂಡಿದ್ದವು.
ಸ್ಥಳಕ್ಕೆ ಧಾವಿಸಿದ ಸ್ಥಳೀಯರು ರಕ್ಷಣಾ ಪ್ರಯತ್ನಗಳಲ್ಲಿ ನೆರವಾಗಿದ್ದು, ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಯಂತ್ರಗಳು ಬೆಂಕಿಯನ್ನು ನಂದಿಸಿದ್ದವು. ಗಾಯಾಳುಗಳನ್ನು ಜೈಸಲ್ಮೇರ್‌ನ ಜವಾಹರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿಯುಂಟಾಗಿದ್ದಂತೆ ಕಂಡು ಬಂದಿದೆ ಎಂದು ಪೋಲಿಸರು ತಿಳಿಸಿದರು.
ರಾಜ್ಯಪಾಲ ಹರಿಭಾವು ಬಾಗಡೆ,ಮುಖ್ಯಮಂತ್ರಿ ಭಜನಲಾಲ ಶರ್ಮಾ ಮತ್ತಿತರರು ಈ ದುರಂತ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.