×
Ad

22 ಬಿಲಿಯನ್‌ ಡಾಲರ್‌ ಮೌಲ್ಯ ಹೊಂದಿದ್ದ BYJU'S ಮೌಲ್ಯ ಈಗ ಶೂನ್ಯ

Update: 2024-06-08 15:24 IST

PC : NDTV 

ಹೊಸದಿಲ್ಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಶಿಕ್ಷಣ ತಂತ್ರಜ್ಞಾನ ಸಂಸ್ಥೆ BYJU'S ಒಂದೊಮ್ಮೆ 22 ಬಿಲಿಯನ್‌ ಡಾಲರ್‌ ಮೌಲ್ಯ ಹೊಂದಿದ್ದರೆ ಈಗ ಅದರ ನಿವ್ವಳ ಮೌಲ್ಯ ಶೂನ್ಯವಾಗಿದೆ ಎಂದು ಎಚ್‌ಎಸ್‌ಬಿಸಿ ನಡೆಸಿದ ಸಂಶೋಧನೆ ತಿಳಿಸಿದೆ.

ಬೈಜೂಸ್‌ನಲ್ಲಿ ಹೂಡಿಕೆ ಕಂಪನಿ ಪ್ರೋಸಸ್‌ನ ಶೇ10ರಷ್ಟು ಪಾಲು ಬಂಡವಾಳದ ಮೌಲ್ಯ ಶೂನ್ಯ ಎಂದು ಎಚ್‌ಎಸ್‌ಬಿಸಿ ಅಧ್ಯಯನ ತಿಳಿಸಿದೆ.

ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬೈಜೂಸ್ ಹಲವಾರು ಕಾನೂನು ಪ್ರಕರಣಗಳನ್ನು ಎದುರಿಸುತ್ತಿದೆ ಮತ್ತು ತನ್ನ ಉದ್ಯೋಗಿಗಳಿಗೆ ವೇತನ ನೀಡಲು ಹೆಣಗಾಡುತ್ತಿದೆ. ಈ ವರ್ಷದ ಜನವರಿಯಲ್ಲಿ ಅಮೆರಿಕಾದ ಹೂಡಿಕೆ ಸಂಸ್ಥೆ ಬ್ಲ್ಯಾಕ್‌ರಾಕ್‌ ಬೈಜೂಸ್‌ನಲ್ಲಿನ ತನ್ನ ಪಾಲನ್ನು 22 ಬಿಲಿಯನ್‌ ಡಾಲರ್‌ನಿಂದ 1 ಬಿಲಿಯನ್‌ ಡಾಲರ್‌ಗೆ ಕಡಿತಗೊಳಿಸಿತ್ತು.

ಬ್ಲ್ಯಾಕ್‌ರಾಕ್‌ ಸಂಸ್ಥೆ ಬೈಜೂಸ್‌ನಲ್ಲಿ ಶೇ 1ಕ್ಕಿಂತಲೂ ಕಡಿಮೆ ಪಾಲು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News