×
Ad

ಪರಿಶಿಷ್ಟ ಪಂಗಡಗಳ ಪಟ್ಟಿಯಿಂದ ಕುಕಿ-ಚಿನ್ ಸಮುದಾಯ ಹೊರಗಿಡಬಹುದೇ?

Update: 2024-01-09 19:42 IST

Photo: PTI 

ಹೊಸದಿಲ್ಲಿ: ಮಣಿಪುರದ ಪರಿಶಿಷ್ಟ ಪಂಗಡಗಳ ಪಟ್ಟಿಯಿಂದ ‘‘ಅಲೆಮಾರಿ ಚಿನ್-ಕುಕಿ’’ ಸಮುದಾಯವನ್ನು ಹೊರಗಿಡುವಂತೆ ಕೋರುವ ಅರ್ಜಿಯನ್ನು ಪರಿಶೀಲಿಸುವಂತೆ ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಸೂಚಿಸಿದೆ.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ (ಅಠವಳೆ)ದ ರಾಷ್ಟ್ರೀಯ ಕಾರ್ಯದರ್ಶಿ ಮಹೇಶ್ವರ್ ತೌನಾವೊಜಮ್ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ಪರಿಶಿಷ್ಟ ಪಂಗಡಗಳ ವ್ಯಾಖ್ಯಾನಕ್ಕೆ ಮೂಲನಿವಾಸವು ಪ್ರಮುಖ ಮಾನದಂಡವಾಗಿರಬೇಕು ಎಂದು ಕೋರಿ ಮಹೇಶ್ವರ್ ತೌನಾವೊಜಮ್ ಡಿಸೆಂಬರ್ 11ರಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡರಿಗೆ ಪತ್ರವೊಂದನ್ನು ಬರೆದಿದ್ದರು.

ಇದರ ಆಧಾರದಲ್ಲಿ ಮಣಿಪುರದ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ನಿಜವಾಗಿ ಯಾರು ಇರಬೇಕು ಎನ್ನುವುದನ್ನು ನಿರ್ಧರಿಸುವಂತೆ ಅವರು ಮನವಿ ಮಾಡಿದ್ದರು. ಅವರು ಆ ಮೂಲಕ, ಪರಿಶಿಷ್ಟ ಪಂಗಡಗಳ ಪಟ್ಟಿಗೆ ಮೇತೈ ಸಮುದಾಯಗಳನ್ನು ಸೇರಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರವು ಈ ಮನವಿಯನ್ನು ಮಣಿಪುರ ಸರಕಾರಕ್ಕೆ ಕಳುಹಿಸಿದೆ. ಈ ವಿಷಯದಲ್ಲಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯದ ಶಿಫಾರಸುಗಳು ಅತ್ಯಂತ ಅಗತ್ಯವಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ನವೆಂಬರ್ ನಲ್ಲಿ, ಇಂಥದೇ ಮನವಿಯನ್ನು ಮೆತೈ ಸಮುದಾಯವನ್ನು ಸಮಗ್ರವಾಗಿ ಪ್ರತಿನಿಧಿಸುವ ‘ವರ್ಲ್ಡ್ ಮೆತೈ ಕೌನ್ಸಿಲ್’ ಕೂಡ ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News