×
Ad

ವಕ್ಫ್ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಗಳನ್ನು ವಜಾಗೊಳಿಸಿ : ಸುಪ್ರೀಂ ಕೋರ್ಟ್‌ಗೆ ಕೋರಿದ ಕೇಂದ್ರ ಸರಕಾರ

Update: 2025-04-25 17:34 IST

ಸಾಂದರ್ಭಿಕ ಚಿತ್ರ | PTI

ಹೊಸದಿಲ್ಲಿ : ವಕ್ಫ್ ತಿದ್ದುಪಡಿ ಕಾಯ್ದೆ-2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಮನವಿ ಮಾಡಿದೆ. ಸಾಂವಿಧಾನಿಕತೆಯ ಬಗ್ಗೆ ಊಹೆ ಇರುವ ಕಾರಣಕ್ಕೆ ಅಂದರೆ ಸಾಂವಿಧಾನಿಕವಾಗಿ ಇದೆಯಾ ಅಥವಾ ಇಲ್ಲವಾ ಎಂಬ ಕಾರಣಕ್ಕೆ ಕಾನೂನಿಗೆ ತಡೆ ತರುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

1,332 ಪುಟಗಳ ಪ್ರಾಥಮಿಕ ಅಫಿಡವಿಟ್‌ನಲ್ಲಿ ಸರಕಾರ ವಿವಾದಾತ್ಮಕ ಕಾನೂನನ್ನು ಸಮರ್ಥಿಸಿಕೊಂಡಿದೆ. 2013ರ ನಂತರ 20 ಲಕ್ಷ ಹೆಕ್ಟೇರ್(ನಿಖರವಾಗಿ 20,92,072.536) ವಕ್ಫ್ ಭೂಮಿಯಲ್ಲಿ ಸೇರ್ಪಡೆಯಾಗಿದೆ ಎಂದು ಹೇಳಿದೆ.

ಮೊಘಲ್ ಯುಗಕ್ಕೂ ಮೊದಲು, ಸ್ವಾತಂತ್ರ್ಯಪೂರ್ವ ಯುಗ ಮತ್ತು ಸ್ವಾತಂತ್ರ್ಯದ ನಂತರದ ಯುಗಗಳಲ್ಲಿ ಭಾರತದಲ್ಲಿ ಒಟ್ಟು 18,29,163.896 ಎಕರೆ ಭೂಮಿಯನ್ನು ವಕ್ಫ್ ಮಾಡಲಾಗಿದೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ. ಖಾಸಗಿ ಮತ್ತು ಸರಕಾರಿ ಆಸ್ತಿಗಳನ್ನು ಅತಿಕ್ರಮಿಸಲು ಹಿಂದಿನ ನಿಬಂಧನೆಗಳನ್ನು ದುರ್ಬಳಕೆ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಿಕೊಂಡಿದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಶೇರ್ಷಾ ಸಿ ಶೇಕ್ ಮೊಹಿದ್ದೀನ್ ಈ ಕುರಿತು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News