×
Ad

ಶಿಕ್ಷಕಿ ಮಾತು ಕೇಳಿ ಸಹಪಾಠಿಗೆ ಹಲ್ಲೆ ಪ್ರಕರಣ: ಮುಸ್ಲಿಂ ವಿದ್ಯಾರ್ಥಿಯನ್ನು ಆಲಿಂಗಿಸಿದ ಹಿಂದೂ ವಿದ್ಯಾರ್ಥಿ

Update: 2023-08-26 22:10 IST

Screengrab: Twitter



ಮುಝಫ್ಫರ್‌ನಗರ: ಮುಸ್ಲಿಂ ಬಾಲಕನಿಗೆ ಹಿಂದೂ ಸಹಪಾಠಿಗಳಿಂದ ಹಲ್ಲೆ ಮಾಡಿಸಿದ ಶಿಕ್ಷಕಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ನರೇಶ್ ಟಿಕಾಯಿತ್ ರಂಗಪ್ರವೇಶ ಮಾಡಿದ್ದು, ಘಟನೆ ನಡೆದ ಖುಬ್ಬಾಪುರ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ವಿದ್ಯಾರ್ಥಿಯ ಕುಟುಂಬಸ್ಥರನ್ನು ಭೇಟಿ ಮಾಡಿದರು.

ಘಟನೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿದ ನರೇಶ್ ಟಿಕಾಯತ್, ‘ಪರಸ್ಪರ ಪ್ರೀತಿಯ ವಾತಾವರಣ ಕೆಡಲು ಬಿಡುವುದಿಲ್ಲ. ಆರೋಪಿ ಶಿಕ್ಷಕ ಮತ್ತು ಶಾಲೆಯ ವಿರುದ್ಧ ಕ್ರಮ ಕೈಗೊಳ್ಳದ ಆಡಳಿತವು ಕೋಮಾದಲ್ಲಿದೆʼ ಎಂದು ಹೇಳಿದರು.

ಆ ಬಳಿಕ ಕೆನ್ನೆಗೆ ಹೊಡೆದಿದ್ದ ಹಿಂದೂ ವಿದ್ಯಾರ್ಥಿ ಮತ್ತು ಪೆಟ್ಟು ತಿಂದಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ಪರಸ್ಪರ ಆಲಿಂಗಿಸುವಂತೆ ಸೂಚಿಸಿದರು. ಆ ಮೂಲಕ ಗ್ರಾಮದಲ್ಲಿ ಈ ವಿಚಾರವಾಗಿ ಯಾವುದೇ ಮನಸ್ತಾಪ ಮುಂದುವರೆಯದಂತೆ ನರೇಶ್‌ ಟೀಕಾಯತ್‌ ಶ್ರಮಿಸಿದ್ದಾರೆ.

ಮಕ್ಕಳಿಬ್ಬರು ಅಪ್ಪಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರೈತ ಮುಖಂಡರ ಈ ನಡೆಯು ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News