×
Ad

ಬೆಂಗಳೂರಿನಲ್ಲಿ ಸಿಸಿಜಿಯ 19ನೇ ಸಭೆ; 118 ಅಂಶಗಳ ಬಗ್ಗೆ ಚರ್ಚೆ

Update: 2025-07-03 22:30 IST

PC : pib.gov.in

ಹೊಸದಿಲ್ಲಿ: ಬೆಂಗಳೂರಿನಲ್ಲಿ ಜುಲೈ 2 ಮತ್ತು 3ರಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ(ಸಿಬಿಐಸಿ)ಯ ಸದಸ್ಯ(ಕಸ್ಟಮ್ಸ್) ಸುರ್ಜಿತ್ ಭುಜಬಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಸ್ಟಮ್ಸ್ ಸಲಹಾ ಗುಂಪಿನ(ಸಿಸಿಜಿ) 19ನೇ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.

ಸಿಸಿಜಿ 2011ರಿಂದಲೂ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಸರಕುಗಳ ಕಸ್ಟಮ್ಸ್ ಕ್ಲಿಯರನ್ಸ್‌ ಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಚರ್ಚಿಸಲು ಉನ್ನತ ರಾಷ್ಟ್ರೀಯ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗುಂಪು ಸಿಐಐ, ಫಿಕ್ಕಿ, ಸೋಚಾಮ್,ನಾಸ್ಕಾಮ್‌ ನಂತಹ ಕೈಗಾರಿಕಾ ಒಕ್ಕೂಟಗಳು ಹಾಗೂ ಕಸ್ಟಮ್ಸ್ ಬ್ರೋಕರ್‌ ಗಳು, ಸರಕು ಸಾಗಣೆದಾರರು, ಬೃಹತ್ ಸರಕು ನಿರ್ವಹಣಾಕಾರರು ಸೇರಿದಂತೆ ಲಾಜಿಸ್ಟಿಕ್ ಪಾಲುದಾರರ ಸಂಘಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಈ ವರ್ಷ 35 ರಫ್ತು ಉತ್ತೇಜನ ಮಂಡಳಿಗಳು ಮತ್ತು ವಾಯು ಸರಕು ಸಾಗಾಣಿಕೆ ಕ್ಷೇತ್ರವನ್ನು ಪ್ರತಿನಿಧಿಸುವ ಎರಡು ಸಂಘಗಳೂ ಈ ಗುಂಪಿಗೆ ಸೇರ್ಪಡೆಗೊಂಡಿವೆ.

ಎರಡು ದಿನಗಳ ಸಭೆಯಲ್ಲಿ 118 ಅಜೆಂಡಾ ಅಂಶಗಳ ಬಗ್ಗೆ ಚರ್ಚಿಸಲಾಯಿತು.

ಸಂವಾದದ ವೇಳೆ ಭುಜಬಲ್ ವ್ಯಾಪಾರ ಸೌಲಭ್ಯಗಳನ್ನು ಹೆಚ್ಚಿಸುವಲ್ಲಿ ಮತ್ತು ಉದ್ಯಮ ಸ್ನೇಹಿ ವಾತಾವರಣವನ್ನು ಬೆಳೆಸುವಲ್ಲಿ ಸಿಸಿಜಿಯ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು.

►ಸಭೆಯಲ್ಲಿ ತೆಗೆದುಕೊಳ್ಳಲಾದ ಮಹತ್ವದ ನಿರ್ಧಾರಗಳು

*ಸೀಮಿತ ಬಂದರು ಸಂಗ್ರಹ ಮೂಲಸೌಕರ್ಯದ ಅತ್ಯುತ್ತಮ ಬಳಕೆಯನ್ನು ಸಾಧ್ಯವಾಗಿಸುವ ಮೂಲಕ ಸಗಟು ದ್ರವ ಸರಕುಗಳ ಬಿಡುಗಡೆಗೆ ನೂತನ ನೀತಿಯ ಪರಿಚಯ.

*ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ಮಾರಾಟವಾಗುವ ಆಭರಣಗಳ ಮೇಲೆ ಸುಂಕ ಹಿಂದೆಗೆತ ಕೋರಿಕೆಗಳ ಇತ್ಯರ್ಥಕ್ಕಾಗಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ(ಎಸ್‌ಒಪಿ)ದ ಅಭಿವೃದ್ಧಿ.

*ವರ್ಧಿತ ವ್ಯಾಪಾರ ಸೌಲಭ್ಯಕ್ಕಾಗಿ ಅಧಿಕೃತ ಆರ್ಥಿಕ ನಿರ್ವಾಹಕ(ಎಇಒ) ಚೌಕಟ್ಟಿನ ಪುನರ್‌ ಪರಿಶೀಲನೆ.

*ಸಣ್ಣ ರಫ್ತುದಾರರನ್ನು ಬೆಂಬಲಿಸಲು ಸಿಬಿಐಸಿ ಮತ್ತು ಅಂಚೆ ಇಲಾಖೆ ನಡುವಿನ ಸಹಭಾಗಿತ್ವವನ್ನು ಇನ್ನಷ್ಟು ಬಲಗೊಳಿಸುವುದು.

*ನಿಯಂತ್ರಕ ಪಾಲನಾ ಕಾರ್ಯವಿಧಾನಗಳನ್ನು ಸರಳಗೊಳಿಸಲು ಇ-ಬ್ಯಾಂಕ್ ಗ್ಯಾರಂಟಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವುದು.

* ನಿರ್ದಿಷ್ಟ ವ್ಯಾಪಾರ ಕಳವಳಗಳನ್ನು ನಿರ್ಣಯಿಸಲು ಮತ್ತು ಹೆಚ್ಚಿನ ಸೌಲಭ್ಯಗಳಿಗಾಗಿ ಮಾರ್ಗೋಪಾಯಗಳನ್ನು ಗುರುತಿಸಲು ಕ್ಷೇತ್ರ ಮಟ್ಟದಲ್ಲಿ ಅಧ್ಯಯನಗಳನ್ನು ನಡೆಸಲು ಒಪ್ಪಂದ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News