×
Ad

ಚುನಾವಣಾ ದತ್ತಾಂಶ ವ್ಯವಸ್ಥೆ ಸದೃಢವಾಗಿದೆ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್

Update: 2025-02-12 21:39 IST

ರಾಜೀವ್ ಕುಮಾರ್ | PTI 

ಹೊಸದಿಲ್ಲಿ: ಪೂರ್ವನಿರ್ಮಿತ ಅಪಾಯದ ಮುನ್ಸೂಚನೆಯನ್ನು ಹೊಂದಿರುವ ಚುನಾವಣಾ ದತ್ತಾಂಶ ವ್ಯವಸ್ಥೆ ಸದೃಢವಾಗಿದ್ದು, ಇದು ಯಾವುದೇ ತಪ್ಪಾಗದಂತೆ ಖಾತರಿ ಪಡಿಸುತ್ತದೆ ಎಂದು ಬುಧವಾರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು.

ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ದತ್ತಾಂಶಗಳನ್ನು ತಿರುಚಲಾಗಿದೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಿಗೇ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.

‘ಲೋಕಸಭೆ 2024 ಅಟ್ಲಸ್’ ಅನ್ನು ಬಿಡುಗಡೆಗೊಳಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, “ಮತಗಟ್ಟೆ ಹಂತದ ಅಧಿಕಾರಿಗಳು ಸೇರಿದಂತೆ ಲಕ್ಷಾಂತರ ಅಧಿಕಾರಿಗಳು ದತ್ತಾಂಶಗಳನ್ನು ಪೂರೈಸುತ್ತಾರೆ. ಅದರ ವಿನ್ಯಾಸದಲ್ಲೇ ಯಾವುದೇ ತಪ್ಪು ನಡೆಯಲು ಸಾಧ್ಯವಾಗುವುದಿಲ್ಲ. ಹಾಗೇನಾದರೂ ನಡೆದರೆ, ಚುನಾವಣಾ ದತ್ತಾಂಶ ವ್ಯವಸ್ಥೆಯು ಅಪಾಯದ ಮುನ್ಸೂಚನೆಯನ್ನು ನೀಡುತ್ತದೆ” ಎಂದು ತಿಳಿಸಿದರು.

ಈ ವ್ಯವಸ್ಥೆಯು ಏನೂ ತಪ್ಪಾಗಲು ಸಾಧ್ಯವಿಲ್ಲ ಎಂಬ ಅಪರಿಮಿತ ಆತ್ಮವಿಶ್ವಾಸವನ್ನು ಚುನಾವಣಾ ಆಯೋಗಕ್ಕೆ ನೀಡಿದೆ. ಯಾರಾದರೂ ತಪ್ಪು ಮಾಡಿದರೆ, ವ್ಯವಸ್ಥೆಯು ಅದನ್ನು ಅಂಗೀಕರಿಸುವುದಿಲ್ಲ ಎಂದು ಅವರು ಹೇಳಿದರು.

ಮತಪಟ್ಟಿಯ ಕುರಿತ ಆರೋಪಗಳಲ್ಲದೆ, ಮತದಾನದ ಮುಕ್ತಾಯದ ಹಂತದಲ್ಲಿ ಮತದಾನದ ಪ್ರಮಾಣದಲ್ಲಿ ಏರಿಕೆಯಾಗಿರುವ ಆರೋಪವೂ ಕೇಳಿ ಬರುತ್ತಿದೆ.

ಅಟ್ಲಸ್-2024 ಚುನಾವಣೆಗಳು ಹಾಗೂ ಚುನಾವಣಾ ಫಲಿತಾಂಶಗಳ ವಿವಿಧ ಆಯಾಮಗಳ ಕುರಿತು ವಿಸ್ತೃತ ಮಾಹಿತಿ ನೀಡುತ್ತದೆ.

ಈ ದಾಖಲೆಯು ಗರಿಷ್ಠ ಪಾರದರ್ಶಕತೆ, ಪ್ರವೇಶಾವಕಾಶ ಹಾಗೂ ಚುನಾವಣಾ ಸಂಬಂಧಿ ದತ್ತಾಂಶಗಳನ್ನು ದೊಡ್ಡ ಮಟ್ಟದಲ್ಲಿ ಬಹಿರಂಗಪಡಿಸುವ ತನ್ನ ಬದ್ಧತೆಗೆ ತಕ್ಕನಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

2024ರ ಸಂಸತ್ ಚುನಾವಣೆಯನ್ನು ಒಟ್ಟಾರೆ 10.5 ಲಕ್ಷ ಮತಗಟ್ಟೆಗಳಲ್ಲಿ ಏಳು ಹಂತಗಳಲ್ಲಿ ನಡೆಸಿ, 44 ದಿನಗಳಲ್ಲಿ ಮುಕ್ತಾಯಗೊಳಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News