ಕೋಲ್ಕತ್ತಾದಲ್ಲಿ ಸ್ಫೋಟ | ಚಿಂದಿ ಆಯುವ ವ್ಯಕ್ತಿಗೆ ಗಾಯ
Update: 2024-09-14 18:13 IST
Image Source : INDIA TV
ಕೋಲ್ಕತ್ತಾ : ಕೋಲ್ಕತ್ತಾದ ಬ್ಲೋಚ್‌ಮನ್ ಸ್ಟ್ರೀಟ್ ಮತ್ತು ಎಸ್‌ಎನ್ ಬ್ಯಾನರ್ಜಿ ರಸ್ತೆಯ ಕ್ರಾಸಿಂಗ್ ಬಳಿ ಶನಿವಾರ ಮಧ್ಯಾಹ್ನ 1.45 ರ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ 58 ವರ್ಷದ ಚಿಂದಿ ಆಯುವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಘಟನಾ ಸ್ಥಳದಲ್ಲಿ ಪ್ಲಾಸ್ಟಿಕ್ ಗೋಣಿ ಚೀಲ ಪತ್ತೆಯಾಗಿದೆ. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿದೆ ಎಂದು ತಿಳಿದು ಬಂದಿದೆ.
ಗಾಯಗೊಂಡವರನ್ನು ಬಾಪಿ ದಾಸ್ ಎಂದು ಗುರುತಿಸಲಾಗಿದ್ದು, ಅವರನ್ನು ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.