×
Ad

ಭಾರತೀಯ ಆಡಳಿತ ಸೇವೆಯಿಂದ ಪೂಜಾ ಖೇಡ್ಕರ್ ಬಿಡುಗಡೆ ಮಾಡಿದ ಕೇಂದ್ರ ಸರಕಾರ

Update: 2024-09-07 18:46 IST

Puja Khedkar | PC: PTI

ಹೊಸದಿಲ್ಲಿ : ಭಾರತೀಯ ಆಡಳಿತ ಸೇವೆ(ಐಎಎಸ್)ಯಿಂದ ಮಾಜಿ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರ ಸರಕಾರ ಬಿಡುಗಡೆ ಮಾಡಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.

ಭಾರತೀಯ ಆಡಳಿತ ಸೇವೆಗೆ ಸೇರಲು ಇತರ ಹಿಂದುಳಿದ ವರ್ಗಗಳು (OBC) ಮತ್ತು ಅಂಗವಿಕಲ ಕೋಟಾದಡಿ ನಕಲಿ ದಾಖಲೆಗಳನ್ನು ನೀಡಿ ವಂಚಿಸಿರುವ ಆರೋಪ ಪೂಜಾ ಮೇಲಿದೆ. ಆದರೆ ಈ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ.

IAS (ಪ್ರೊಬೇಷನ್) ನಿಯಮಗಳು, 1954 ರ ನಿಯಮ 12 ರ ಅಡಿಯಲ್ಲಿ ಖೇಡ್ಕರ್ ಅವರನ್ನು ಭಾರತೀಯ ಆಡಳಿತ ಸೇವೆಯಿಂದ ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ಸೆಪ್ಟೆಂಬರ್ 6, 2024 ರ ಆದೇಸಿದೆ ಎಂದು ತಿಳಿದು ಬಂದಿದೆ.

ಪೂಜಾ ಖೇಡ್ಕರ್ ಅವರು ಮಹಾರಾಷ್ಟ್ರ ಕೇಡರ್ ನಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News