ಚಂದ್ರಬಾಬು ನಾಯ್ಡು ಮೂರು ಜಾಮೀನು ಅರ್ಜಿ ತಿರಸ್ಕೃತ
Update: 2023-10-09 21:58 IST
ಎನ್. ಚಂದ್ರಬಾಬು ನಾಯ್ಡು | Photo : PTI
ಅಮರಾವತಿ : ತೆಲುಗು ದೇಶಂ ಪಕ್ಷದ ವರಿಷ್ಠ ಎನ್. ಚಂದ್ರಬಾಬು ನಾಯ್ಡು ಸಲ್ಲಿಸಿದ ಮೂರು ಜಾಮೀನು ಅರ್ಜಿಗಳನ್ನು ಆಂಧ್ರಪ್ರದೇಶ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಅಮರಾವತಿ ಇನ್ನರ್ ರಿಂಗ್ ರೋಡ್ ಹಗರಣ, ಅಂಗಲ್ಲು ಹಿಂಸಾಚಾರ ಪ್ರಕರಣಗಳಲ್ಲಿ ಜಾಮೀನು ಹಾಗೂ ಫೈಬರ್ನೆಟ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಅರ್ಜಿ ಸಲ್ಲಿಸಿದ್ದರು.
ಚಂದ್ರಬಾಬು ನಾಯ್ದು ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೌಶಲ ಅಭಿವೃದ್ಧಿ ನಿಗಮಕ್ಕೆ ಸೇರಿದ ಸರಿಸುಮಾರು 371 ಕೋ. ರೂ.ವನ್ನು ಬೇನಾಮಿ ಕಂಪೆನಿಗಳ ಮೂಲಕ ದುರ್ಬಳಕೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಆಂಧ್ರಪ್ರದೇಶದ ಸಿಐಡಿ ಚಂದ್ರಬಾಬು ನಾಯ್ದು ಅವರನ್ನು ಸೆಪ್ಟಂಬರ್ 9ರಂದು ಬಂಧಿಸಿತ್ತು.