×
Ad

ಛತ್ತೀಸ್‌ಗಡ | ನಿರ್ಮಾಣ ಹಂತದ ಕಟ್ಟಡ ಭಾಗಶಃ ಕುಸಿದು ಇಬ್ಬರು ಮೃತ್ಯು, ಆರು ಜನರಿಗೆ ಗಾಯ

Update: 2025-01-12 20:44 IST

PC : PTI 

ರಾಯಪುರ: ಶನಿವಾರ ಇಲ್ಲಿಯ ವಿಶಾಲ ನಗರ ಪ್ರದೇಶದಲ್ಲಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಸ್ಲ್ಯಾಬ್ ಹಾಕುತ್ತಿದ್ದಾಗ ಸೆಂಟರಿಂಗ್ ಚೌಕಟ್ಟು ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಇತರ ಆರು ಜನರು ಗಾಯಗೊಂಡಿದ್ದಾರೆ.

ಏಳು ಮತ್ತು ಹತ್ತನೇ ಅಂತಸ್ತುಗಳ ನಡುವೆ ಸ್ಲ್ಯಾಬ್ ಹಾಕುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿದ್ದ ಎಂಟು ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು,ಆದರೆ ಅವರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ ಎಂದು ಪೋಲಿಸರು ತಿಳಿಸಿದರು.

ಕಟ್ಟಡ ನಿರ್ಮಾಣ ಸ್ಥಳವು ಖಾಸಗಿ ಡೆವಲಪರ್‌ಗೆ ಸೇರಿದ್ದು,ಅವರು ಮೃತರ ಕುಟುಂಬಗಳಿಗೆ ತಲಾ 10 ಲ.ರೂ.ಗಳ ಪರಿಹಾರವನ್ನು ಪ್ರಕಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News