×
Ad

ಚತ್ತೀಸ್‌ಗಢ: ಐಇಡಿ ಸ್ಫೋಟ; ಮೂವರಿಗೆ ಗಾಯ

Update: 2025-05-30 20:34 IST

ಸಾಂದರ್ಭಿಕ ಚಿತ್ರ 

ಬಿಜಾಪುರ: ಚತ್ತೀಸ್‌ ಗಢದ ಬಿಜಾಪುರ ಜಿಲ್ಲೆಯಲ್ಲಿ ಶಂಕಿತ ನಕ್ಸಲೀಯರು ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಶುಕ್ರವಾರ ಸ್ಫೋಟಗೊಂಡು ಓರ್ವ ಬಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಈ ಘಟನೆ ಮಡ್ಡೆಡ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂದೆಪಾರಾ ಗ್ರಾಮದ ಸಮೀಪ ಬೆಳಗ್ಗೆ ಸುಮಾರು 9 ಗಂಟೆಗೆ ಸಂಭವಿಸಿದೆ.

ದಂಪಾಯ ಗ್ರಾಮದ ನಿವಾಸಿಗಳಾದ ಗೋಟೆ ಜೋಗ (45), ಬಡ್ಡೆ ಸುನೀಲ್ (20) ಹಾಗೂ ವಿವೇಕ್ ದೋಧಿ (17) ಬಂದೆಪಾರಕ್ಕೆ ನಡೆದುಕೊಂಡು ಹೋಗುತ್ತಿರುವ ಸಂದರ್ಭ ಐಇಡಿ ಮೇಲೆ ಕಾಲಿರಿಸಿದ್ದಾರೆ. ಇದರಿಂದ ಐಇಡಿ ಸ್ಫೋಟಗೊಂಡು ಮೂವರು ಗಾಯಗೊಂಡರು ಎಂದು ಅವರು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಆಡಳಿತ ಸ್ಥಳಕ್ಕೆ ಆ್ಯಂಬುಲೆನ್ಸ್ ಕಳುಹಿಸಿದೆ. ಗಾಯಗೊಂಡ ಮೂವರನ್ನು ಕರೆ ತಂದು ಆಸ್ಪತ್ರೆಗೆ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News