×
Ad

ಛತ್ತೀಸ್‌ ಗಡ | ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಾರು ನುಗ್ಗಿಸಿದ ಪಾನಮತ್ತ ಚಾಲಕ!

ಮೂವರು ಮೃತ್ಯು, 22 ಜನರಿಗೆ ಗಾಯ

Update: 2025-09-03 21:53 IST

Screenbrab : Youtube

ಜಶಪುರ,ಸೆ.3: ಛತ್ತೀಸ್‌ಗಡದ ಜಶಪುರ ಜಿಲ್ಲೆಯ ಜುರುದಂಡ್ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆಯುತ್ತಿದ್ದ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ಪಾನಮತ್ತ ಚಾಲಕನೋರ್ವ ತನ್ನ ಕಾರನ್ನು ನುಗ್ಗಿಸಿದ ಪರಿಣಾಮ ಮೂವರು ಮೃತಪಟ್ಟಿದ್ದು,ಇತರ 22 ಜನರು ಗಾಯಗೊಂಡಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ 100ಕ್ಕೂ ಅಧಿಕ ಸ್ಥಳೀಯರು ಭಾಗಿಯಾಗಿದ್ದರು. 17ರಿಂದ 32 ವರ್ಷ ವಯೋಮಾನದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕೆಲವರನ್ನು ನೆರೆಯ ಸರ್ಗುಜಾ ಜಿಲ್ಲೆಯ ಅಂಬಿಕಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಇತರರು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಎಸ್‌ಪಿ ಶಶಿ ಮೋಹನ ಸಿಂಗ್ ತಿಳಿಸಿದರು.

ಚಾಲಕನನ್ನು ಬಂಧಿಸಿರುವ ಪೋಲಿಸರು ಕಾರನ್ನು ವಶಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News