×
Ad

ಚತ್ತೀಸ್‌ಗಢ: 208 ಮಾವೋವಾದಿಗಳು ಶರಣಾಗತ

Update: 2025-10-17 21:00 IST

Photo Credit : thehindu.com

ಜಗದಲ್ಪುರ, ಅ. 17: 110 ಮಹಿಳಾ ನಕ್ಸಲೀಯರು ಸೇರಿದಂತೆ 208ಕ್ಕೂ ಅಧಿಕ ನಕ್ಸಲೀಯರು ಶುಕ್ರವಾರ ಚತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ಜಗದಲ್ಪುರದಲ್ಲಿರುವ ಮೀಸಲು ಪೊಲೀಸ್ ಲೈನ್‌ನಲ್ಲಿ ಶರಣಾಗತರಾಗಿದ್ದಾರೆ.

ಈ ಘಟನೆ ಚತ್ತೀಸ್‌ಗಡದಲ್ಲಿ ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ)ಗೆ ದೊಡ್ಡ ಹಿನ್ನಡೆ ಉಂಟು ಮಾಡಿದೆ.

ಹಿರಿಯ ನಕ್ಸಲ್ ನಾಯಕ ರೂಪೇಶ್ ನೇತೃತ್ವದಲ್ಲಿ ಶರಣಾಗತರಾದ ನಕ್ಸಲೀಯರು ಎ.ಕೆ. 47, ಇನ್ಸಾಸ್ ಅಸಾಲ್ಟ್ ರೈಫಲ್ಸ್, ಸೆಲ್ಪ್ ಲೋಡಿಂಗ್ ರೈಫಲ್ (ಎಸ್‌ಎಲ್‌ಆರ್), ಬ್ಯಾರಲ್ ಗ್ರೆನೇಡ್ ಲಾಂಚರ್ (ಬಿಜಿಎಲ್), ಇತರ ಶಸ್ತ್ರಾಸ್ತ್ರಗಳು ಸೇರಿದಂತೆ 153 ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ.

ಬಸ್ಸಿನಲ್ಲಿ ಆಗಮಿಸಿದ ಅವರಿಗೆ ಸ್ಥಳದಲ್ಲಿ ಸಾಂಕೇತಿಕವಾಗಿ ಕೆಂಪು ಹಾಸಿನ ಸ್ವಾಗತ ನೀಡಲಾಯಿತು. ಮಾವೋವಾದಿಗಳು ಮುಖ್ಯವಾಹಿನಿಗೆ ಮರು ಸೇರ್ಪಡೆಯಾಗುವುದನ್ನು ಸೂಚಿಸುವ ‘ಪುನ ಮಾರ್ಗೇಂ’ ಔಪಚಾರಿಕ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರನ್ನೂ ವೇದಿಕೆಗೆ ಕರೆದು ಸಂವಿಧಾನದ ಪ್ರತಿ ಹಾಗೂ ಗುಲಾಬಿಯನ್ನು ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News