×
Ad

ಚತ್ತೀಸ್‌ ಗಢ: ಐಇಡಿ ಸ್ಫೋಟ; ಸಿಎಎಫ್ ಯೋಧ ಮೃತ್ಯು

Update: 2025-04-21 21:10 IST

ಸಾಂದರ್ಭಿಕ ಚಿತ್ರ | PC : PTI

ಬಿಜಾಪುರ : ಚತ್ತೀಸ್‌ ಗಡದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲೀಯರು ಇರಿಸಿದ್ದ ಐಇಡಿ (ಸುಧಾರಿತ ಸ್ಫೋಟಕ) ಸೋಮವಾರ ಸ್ಫೋಟಗೊಂಡು ಚತ್ತೀಸ್‌ ಗಢ ಶಸಸ್ತ್ರ ಪಡೆ (ಸಿಎಎಫ್)ಯ ಯೋಧನೋರ್ವ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಸ್ತೆ ನಿರ್ಮಾಣ ಕಾಮಗಾರಿಗೆ ಭದ್ರತೆ ಒದಗಿಸಲು ಸಿಎಎಫ್ ತಂಡ ಗಸ್ತು ನಡೆಸುತ್ತಿದ್ದ ತೋಯ್ನಾರ್ ಹಾಗೂ ಫರ್ಸೆಗಢ ಗ್ರಾಮಗಳ ನಡುವೆ ಈ ಸ್ಫೋಟ ಸಂಭವಿಸಿದೆ. ತೊಯ್ನಾರ್‌ನಿಂದ ಫರ್ಸೆಗಢದ ವರೆಗೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.

ಸಿಎಫ್‌ನ 19ನೇ ಬೆಟಾಲಿಯನ್‌ಗೆ ಸೇರಿದ ಕಾನ್ಸ್‌ಟೇಬಲ್ ಮನೋಜ್ ಪೂಜಾರಿ (26) ಆಕಸ್ಮಿಕವಾಗಿ ಐಇಡಿ ಮೇಲೆ ಕಾಲಿರಿಸಿದಾಗ, ಅದು ಸ್ಫೋಟಗೊಂಡು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಬಿಜಾಪುರ ಸೇರಿದಂತೆ 7 ಜಿಲ್ಲೆಗಳನ್ನು ಒಳಗೊಂಡ ಬಸ್ತಾರ್ ವಲಯದ ದುರ್ಗಮ ಪ್ರದೇಶಗಳಲ್ಲಿ ಗಸ್ತು ನಡೆಸುವ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿರಿಸಿ ಮಾವೋವಾದಿಗಳು ಅರಣ್ಯದ ಮಣ್ಣಿನ ರಸ್ತೆಗಳು ಹಾಗೂ ರಸ್ತೆಗಳಲ್ಲಿ ಆಗಾಗ ಐಇಡಿ ಇರಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News