ಬಾಲಕಿ ಮೇಲೆ 10 ವರ್ಷ ಅತ್ಯಾಚಾರ: ಶಿಶು ಪಾಲನಾ ಗೃಹದ ನಿರ್ದೇಶಕನ ಬಂಧನ
Update: 2023-09-08 12:22 IST
ಕೊಲ್ಕತ್ತಾ: ಶಿಶುಪಾಲನಾ ಗೃಹದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ನೀಡಿದ ದೂರಿನ ಆಧಾರದಲ್ಲಿ ಸಂಸ್ಥೆಯ ನಿರ್ದೇಶಕ, ಅಂಧರ ಶಾಲೆ ಮತ್ತು ಮಕ್ಕಳ ಪಾಲನಾಗೃಹದ ಪ್ರಾಚಾರ್ಯ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪಾಲನಾಗೃಹದಲ್ಲಿ 10 ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ಬಾಲಕಿ ದೂರಿದ್ದಾಳೆ. ದೂರಿನ ಆಧಾರದಲ್ಲಿ ಸಂಸ್ಥೆಯ ನಿರ್ದೇಶಕ, ಪ್ರಾಚಾರ್ಯ ಹಾಗೂ ಅಡುಗೆಯವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಆಧಾರದಲ್ಲಿ ಪಾಲನಾಗೃಹದ ಎಲ್ಲ ಮಕ್ಕಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ತನಿಖೆ ಮುಂದುವರಿದಿದೆ.