×
Ad

ಎಲ್‌ಜೆಪಿ ಅಧ್ಯಕ್ಷರಾಗಿ ಚಿರಾಗ್ ಪಾಸ್ವಾನ್ ಪುನರಾಯ್ಕೆ

Update: 2024-08-25 20:21 IST

Photo : ANI

ರಾಂಚಿ : ಲೋಕಜನಶಕ್ತಿ ಪಕ್ಷ (ರಾಮ್‌ವಿಲಾಸ್ ಪಾಸ್ವಾನ್)ದ ಅಧ್ಯಕ್ಷರಾಗಿ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ರವಿವಾರ ಪುನರಾಯ್ಕೆಗೊಂಡಿದ್ದಾರೆ.

ರಾಂಚಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಚಿರಾಗ್ ಪಾಸ್ವಾನ್ ಅವರನ್ನು ಐದು ವರ್ಷಗಳ ಅವಧಿಗೆ ಪಕ್ಷದ ವರಿಷ್ಠರಾಗಿ ಅವಿರೋಧ ಆಯ್ಕೆ ಮಾಡಲಾಯಿತು.

ಸಭೆಯ ಬಳಿಕ ಕೇಂದ್ರ ಆಹಾರ ಸಂಸ್ಕರಣ ಕೈಗಾರಿಕೆಗಳ ಸಚಿವರೂ ಆದ ಚಿರಾಗ್ ಪಾಸ್ವಾನ್ ಸುದ್ದಿಗಾರರ ಜೊತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಮುಂಬರುವ ಹರ್ಯಾಣ, ಜಮ್ಮುಕಾಶ್ಮೀರ ಹಾಗೂ ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಕುರಿತಾಗಿಯೂ ಸಭೆಯಲ್ಲಿ ಚರ್ಚಿಸಲಾಯಿತೆಂದು ಅವರು ಹೇಳಿದರು.

ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಜೆಪಿ ಪಕ್ಷವು, ಒಂದೋ ಬಿಜೆಪಿ ಜೊತೆ ಮೈತ್ರಿಯೊಂದಿಗೆ ಇಲ್ಲವೇ ಸ್ವತಂತ್ರವಾಗಿ ಸ್ಪರ್ಧಿಸಲಿದೆಯೆಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News