×
Ad

ನಿವೃತ್ತಿ ಬಳಿಕ ಸರಕಾರಿ ಹುದ್ದೆ ಸ್ವೀಕರಿಸಲ್ಲ: ಸಿಜೆಐ ಗವಾಯಿ ಘೋಷಣೆ

Update: 2025-07-26 21:28 IST

ಸಿಜೆಐ ಗವಾಯಿ | PC : PTI 

ಅಮರಾವತಿ,ಜು.26: ನಿವೃತ್ತಿ ನಂತರ ತಾನು ಯಾವುದೇ ಸರಕಾರಿ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಮತ್ತು ವಕೀಲಿ ಸಮಾಲೋಚನೆ ಹಾಗೂ ಮಧ್ಯಸ್ಥಿಕೆ (ಆರ್ಬಿಟ್ರೇಶನ್)ಯಲ್ಲಿ ತೊಡಗುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ರವಿವಾರ ತಿಳಿಸಿದ್ದಾರೆ ಹಾಗೂ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮಹಾರಾಷ್ಟ್ರದ ಸೆಶನ್ಸ್ ನ್ಯಾಯಾಲಯದಲ್ಲಿ ದಿವಂಗತ ಟಿ.ಆರ್.ಗಿಲ್ಡಾ ಸ್ಮಾರಕ ಇ-ಗ್ರಂಥಾಲಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಗವಾಯಿ ಅವರು ನವೆಂಬರ್ 24ರಂದು ನಿವೃತ್ತರಾಗಲಿದ್ದಾರೆ.

‘‘ಈ ಹಿಂದೆಯೂ ನಾನು ನವೆಂಬರ್ 24ರ ಆನಂತರ ಯಾವುದೇ ಸರಕಾರಿ ಹುದ್ದೆಯನ್ನು ಸ್ವೀಕರಿಸುವುದಿಲ್ಲವೆಂದು ಹಲವಾರು ಸಂದರ್ಭಗಳಲ್ಲಿ ಘೋಷಿಸಿಕೊಂಡಿದ್ದೇನೆ. ನಾನು ವಕೀಲಿ ಸಮಾಲೋಚನೆ ಹಾಗೂ ರಾಜಿಮಧ್ಯಸ್ಥಿಕೆ (ಆರ್ಬಿಟ್ರೇಶನ್)’’ಯನ್ನು ನಡೆಸುವುದಾಗಿ ತಿಳಿಸಿದ್ದಾರೆ.

ಸಿಜೆಐ ಬಿ.ಆರ್.ಗವಾಯಿ ಅವರು ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ. ಗವಾಯಿ ಅವರು ಹುಟ್ಟೂರಾದ ಅಮರಾವತಿ ಜಿಲ್ಲೆಯ ದಾರಾಪುರದಲ್ಲಿರುವ ತನ್ನ ತಂದೆ ಹಾಗೂ ಕೇರಳ ಮತ್ತು ಬಿಹಾರದ ಮಾಜಿ ರಾಜ್ಯಪಾಲರಾದ ಆರ್.ಎಸ್.ಗವಾಯಿ ಸ್ಮಾರಕಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು.

ತಮ್ಮ ಗ್ರಾಮದಲ್ಲಿರುವ ತನ್ನ ತಂದೆಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಸಿಜೆಐ ಅವರು ಕುಟುಂಬ ಸದಸ್ಯರೊಂದಿಗೆ ಪಾಲ್ಗೊಂಡರು. ದಾರಾಪುರ ಗ್ರಾಮದಲ್ಲಿ ನಿರ್ಮಿಸಲಾಗುವ ಪ್ರವೇಶದ್ವಾರಕ್ಕೆ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಪ್ರವೇಶದ್ವಾರಕ್ಕೆ ದಾದಾಸಾಹೇಬ್ ಎಂದು ಅಕ್ಕರೆಯಿಂದ ಕರೆಯಲಾಗುವ ಆರ್.ಎಸ್.ಗವಾಯಿ ಅವರ ಹೆಸರನ್ನಿಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News