×
Ad

ಮಹುವಾ ಮೊಯಿತ್ರಾ ಮನವಿ ಕುರಿತು ಸಿಜೆಐ ಪರಿಶೀಲಿಸಲಿದ್ದಾರೆ: ಸುಪ್ರೀಂ

Update: 2023-12-13 21:12 IST

ಮಹುವಾ ಮೊಯಿತ್ರಾ | Photo; PTI 

ಹೊಸದಿಲ್ಲಿ: ಲೋಕಸಭೆಯಿಂದ ತನ್ನನ್ನು ಉಚ್ಛಾಟಿಸಿರುವುದನ್ನು ಪ್ರಶ್ನಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಸಲ್ಲಿಸಿದ ಮನವಿಯನ್ನು ಪಟ್ಟಿ ಮಾಡುವ ಕುರಿತಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಪರಿಶೀಲನೆ ನಡೆಸಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ಬುಧವಾರ ತಿಳಿಸಿದೆ.

ಮಹುವಾ ಮೊಯಿತ್ರಾ ಅವರ ಮನವಿಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಷನ್‌ಕೌಲ್ ಹಾಗೂ ಸುಧಾಂಶು ಧುಲಿಯಾ ಅವರ ಪೀಠದ ಮುಂದೆ ತುರ್ತು ಪಟ್ಟಿ ಮಾಡಲು ಉಲ್ಲೇಖಿಸಲಾಗಿದೆ.

‘‘ಮುಖ್ಯ ನ್ಯಾಯಮೂರ್ತಿ ಈ ಮನವಿಯ ಪಟ್ಟಿ ಮಾಡುವ ಕುರಿತಂತೆ ಪರಿಶೀಲನೆ ನಡೆಸಲಿದ್ದಾರೆ’’ ಎಂದು ನ್ಯಾಯಮೂರ್ತಿ ಕೌಲ್ ಅವರು ಹಿರಿಯ ನ್ಯಾಯವಾದಿ ಅಭಿಷೇಕ್ ಸಿಂಘ್ವಿ ಅವರಿಗೆ ತಿಳಿಸಿದರು.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಬುಧವಾರ ಈ ವಿಷಯದ ಕುರಿತು ವಿಚಾರಣೆ ನಡೆಸಿತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News