×
Ad

ಮಹಾರಾಷ್ಟ್ರದಲ್ಲಿ ಮಹಾಯುತಿಗೆ ಸ್ಪಷ್ಟ ಜನಾದೇಶ: ಅಜಿತ್ ಪವಾರ್

Update: 2024-11-23 19:47 IST

ಅಜಿತ್ ಪವಾರ್ | PTI  

ಮುಂಬೈ: ಮಹಾರಾಷ್ಟ್ರದಲ್ಲಿ ಭರ್ಜರಿ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಎನ್ಸಿಪಿ ಮುಖ್ಯಸ್ಥ ಅಜಿತ ಪವಾರ್ ಅವರು,‘ರಾಜ್ಯದ ಜನರು ಅಭಿವೃದ್ಧಿಯನ್ನು ನೋಡಿದ್ದಾರೆ ಮತ್ತು ಮಹಾಯುತಿಗೆ ಸ್ವಷ್ಟವಾದ ಜನಾದೇಶ ಲಭಿಸಿದೆ. ಮಹಾರಾಷ್ಟ್ರ ಜನತೆಗೆ ನಮ್ಮ ಕೃತಜ್ಞತೆಗಳು’ ಎಂದು ಹೇಳಿದರು.

ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕಾಗಿ ಮೈತ್ರಿಕೂಟದ ಎಲ್ಲ ಪಕ್ಷಗಳ ಕಾರ್ಯಕರ್ತರಿಗೂ ಅವರು ಧನ್ಯವಾದಗಳನ್ನು ಸಲ್ಲಿಸಿದರು.

‘ನಮ್ಮ ಯೋಜನೆಗಳನ್ನು ಟೀಕಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ನಾವು ವೈಫಲ್ಯವನ್ನು ಅನುಭವಿಸಿದ್ದೆವು. ಅಂತಹ ಸೋಲು ಎದುರಾಗುತ್ತದೆ ಎಂದು ನಾವು ಭಾವಿಸಿಯೇ ಇರಲಿಲ್ಲ. ಆದರೆ ಅದರಿಂದ ನಾವು ಪಾಠವನ್ನು ಕಲಿತಿದ್ದೆವು. ಮಾಝಿ ಲಾಡಕಿ ಬಹೀಣ(ನನ್ನ ಪ್ರೀತಿಯ ಸೋದರಿ) ಯೋಜನೆ ಪ್ರತಿಯೊಬ್ಬರನ್ನೂ ದೂರ ತಳ್ಳಿದೆ. ಯಾರಿಗೇ ಆದರೂ ಇಂತಹ ಅದ್ಭುತ ಗೆಲುವನ್ನು ನಾನೆಂದಿಗೂ ನೋಡಿರಲಿಲ್ಲ ’ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News