×
Ad

ವಿಶ್ವಾಸಮತ ಗೆದ್ದ ಚಂಪೈ ಸೊರೇನ್‌ ನೇತೃತ್ವದ ಜಾರ್ಖಂಡ್‌ ಸರ್ಕಾರ

Update: 2024-02-05 14:25 IST

Photo: ANI

ರಾಂಚಿ: ಜಾರ್ಖಂಡ್‌ನ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್‌ ನೇತೃತ್ವದ ಸರ್ಕಾರ ಇಂದು ರಾಜ್ಯ ವಿಧಾನಸಭೆಯಲ್ಲಿ ನಡೆದ ಮಹತ್ವದ ವಿಶ್ವಾಸಮತ ಗೆದ್ದಿದೆ. ಸರ್ಕಾರಕ್ಕೆ ವಿಶ್ವಾಸಮತ ಪರೀಕ್ಷೆಯಲ್ಲಿ ಒಟ್ಟು 47 ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಂಧನದಲ್ಲಿರುವ ಮಾಜಿ ಸಿಎಂ ಹೇಮಂತ್‌ ಸೊರೇನ್ ಕೂಡ ಇಂದು ತಮ್ಮ ಮತ ಚಲಾಯಿಸಲು ವಿಧಾನಸಭೆಗೆ ಬಿಗಿ ಭದ್ರತೆಯಲ್ಲಿ ಆಗಮಿಸಿದ್ದರು. ಪಿಎಂಎಲ್‌ಎ ನ್ಯಾಯಾಲಯವೊಂದು ಅವರಿಗೆ ಇಂದು ತಮ್ಮ ಮತ ಚಲಾಯಿಸಲು ಅನುವು ಮಾಡಿಕೊಡಲು ಅನುಮತಿಸಿತ್ತು.

ಮಾಜಿ ಮುಖ್ಯಮಂತ್ರಿ ಜೆಎಂಎಂ ಮುಖಂಡ ಹೇಮಂತ್‌ ಸೊರೇನ್‌ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದ ನಂತರ ಚಂಪೈ ಸೀಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರಿಗೆ ವಿಶ್ವಾಸಮತ ಸಾಬೀತುಪಡಿಸಲು ರಾಜ್ಯಪಾಲರು ಹತ್ತು ದಿನಗಳ ಕಾಲಾವಕಾಶ ನೀಡಿದ್ದರು.

ಇದರ ಬೆನ್ನಲ್ಲೇ ಯಾವುದೇ ಕುದುರೆವ್ಯಾಪಾರಕ್ಕೆ ತಡೆ ಹೇರಲು ಜೆಎಂಎಂ ಶಾಸಕರನ್ನು ಹೈದರಾಬಾದ್‌ನ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. ಇಂದಿನ ವಿಶ್ವಾಸಮತ ಹಿನ್ನೆಲೆಯಲ್ಲಿ ಶಾಸಕರೆಲ್ಲರೂ ರವಿವಾರವೇ ರಾಂಚಿಗೆ ವಾಪಸಾಗಿದ್ದರು.

ಒಟ್ಟು 81 ಸದಸ್ಯರ ಜಾರ್ಖಂಡ್‌ ವಿಧಾನಸಭೆಯಲ್ಲಿ ಜೆಎಂಎಂ 29 ಶಾಸಕರನ್ನು ಹೊಂದಿದ್ದು ಮಿತ್ರ ಪಕ್ಷ ಕಾಂಗ್ರೆಸ್‌ 17 ಶಾಸಕರನ್ನು ಹೊಂದಿದೆ. ಆರ್‌ಜೆಡಿ ಮತ್ತು ಸಿಪಿಐ (ಎಂಎಲ್) ತಲಾ ಒಂದು ಶಾಸಕರನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News