ಪ್ರತಿಕೂಲ ಹವಾಮಾನ: ಕೇರಳದಲ್ಲಿ ಭೂಸ್ಪರ್ಶ ಮಾಡಿದ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್
PC : PTI
ಕೊಚ್ಚಿ: ಗುರುವಾರ ಪ್ರತಿಕೂಲ ಹವಾಮಾನದ ಕಾರಣಕ್ಕೆ ದೈನಂದಿನ ಕರಾವಳಿ ಗಸ್ತು ನಡೆಸುತ್ತಿದ್ದ ಕೋಸ್ಟ್ ಗಾರ್ಡ್ ಹೆಲಿಕಾಪ್ಟರೊಂದು ಕಾಲೇಜು ಮೈದಾನವೊಂದರಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭೂಸ್ಪರ್ಶ ಮಾಡಿತು ಎಂದು ಎಂದು ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಚೇತಕ್ ಹೆಲಿಕಾಪ್ಟರ್ ತನ್ನ ದೈನಂದಿನ ಗಸ್ತು ಕಾರ್ಯಾಚರಣೆಯಿಂದ ಹಿಂದಿರುಗುವಾಗ ಪ್ರತಿಕೂಲ ಬಿರುಗಾಳಿಗೆ ಸಿಲುಕಿದ್ದರಿಂದ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸುರಕ್ಷತಾ ಕ್ರಮವಾಗಿ ಎರ್ನಾಕುಲಂ ಜಿಲ್ಲೆಯ ಕೊತ್ತಮಂಗಲಂ ಬಳಿಯ ಚೆಲಾಡ್ ನಲ್ಲಿರುವ ಸೇಂಟ್ ಗ್ರೆಗೋರಿಯಸ್ ದಂತ ವೈದ್ಯಕೀಯ ಕಾಲೇಜಿನ ಫುಟ್ ಬಾಲ್ ಮೈದಾನದಲ್ಲಿ ಸಿಬ್ಬಂದಿಗಳು ಹೆಲಿಕಾಪ್ಟರ್ ಅನ್ನು ಭೂಸ್ಪರ್ಶ ಮಾಡಿದರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಹವಾಮಾನ ಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರ, ತನ್ನ ಪ್ರಯಾಣವನ್ನು ಮುಂದುವರಿಸಿದ ಹೆಲಿಕಾಪ್ಟರ್, ನೆಡುಂಬಸ್ಸೇರಿಯಲ್ಲಿನ ಕರಾವಳಿ ರಕ್ಷಣಾ ಪಡೆಯ ವಾಯು ಸಂಕೀರ್ಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು ಎಂದೂ ಪ್ರಕಟನೆಯಲ್ಲಿ ಹೇಳಲಾಗಿದೆ.